
ಹುಬ್ಬಳ್ಳಿ : ಪತ್ರಕರ್ತರಿಗೆ ವಿಮಾ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ವಿದ್ಯುನ್ಮಾನ ಮಾಧ್ಯಮ ಪತ್ರಕರ್ತರ ಸಂಘದಿಂದ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮೇಯರ್ ಹಾಗೂ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಪ್ರಕಾಶ ನೂಲ್ವಿ ನೇತೃತ್ವದಲ್ಲಿ ಮೇಯರ್ ರಾಮಪ್ಪ ಬಡಿಗೇರ ಹಾಗೂ ಆಯುಕ್ತ ರುದ್ರೇಶ್ ಘಾಳಿ ಅವರಿಗೆ ಮನವಿ ಸಲ್ಲಿಸಲಾಯಿತು.

ಹಗಲಿರುಳೆನ್ನದೆ ಕರ್ತವ್ಯ ನಿರ್ವಹಿಸುತ್ತಿರೋ ಪತ್ರಕರ್ತರು ಕೆಲವೊಮ್ಮೆ ಅನಾರೋಗ್ಯಕ್ಕೆ, ಅಪಘಾತಗಳಿಗೆ ತುತ್ತಾಗುವ ಸಂದರ್ಭಗಳು ಬರುತ್ತವೆ. ಪತ್ರಕರ್ತರ ಆರ್ಥಿಕ ಸ್ಥಿತಿ ಸುಸ್ಥಿತಿಯಲ್ಲಿ ಇಲ್ಲದ ಕಾರಣ ಆಸ್ಪತ್ರೆ ಖರ್ಚು ವೆಚ್ಚ ಇತ್ಯಾದಿ ನಿಭಾಯಿಸಲು ಮಾಧ್ಯಮ ಪ್ರತಿನಿಧಿಗಳು ಮತ್ತು ಅವರ ಕುಟುಂಬಸ್ಥರು ತೀವ್ರ ತೊಂದರೆ ಅನುಭವಿಸಬೇಕಾಗುತ್ತದೆ. ಸಮಾಜಕ್ಕಾಗಿ ತಮ್ಮಸೇವೆ ಮುಡಿಪಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳಿಗೆ ಮತ್ತು ಅವರ ಕುಟುಂಬಸ್ಥರಿಗೆ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ವತಿಯಿಂದ ವಿಮಾ ಸೌಲಭ್ಯ ಕಲ್ಪಿಸಿದಲ್ಲಿ ಪಾಲಿಕೆ ಆರ್ಥಿಕ ನೆರವು, ನೈತಿಕ ಸ್ಥೈರ್ಯ ತುಂಬಿದಂತಾಗುತ್ತದೆ. ಈ ನಿಟ್ಟಿನಲ್ಲಿ ಮಹಾನಗರ ಪಾಲಿಕೆಯಿಂದ ಪತ್ರಕರ್ತರು ಮತ್ತು ಅವರ ಕುಟುಂಬಸ್ಥರಿಗೆ ವಿಮಾ ಸೌಲಭ್ಯ ಕಲ್ಪಿಸಬೇಕೆಂಬು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸಭಾ ನಾಯಕ ವೀರಣ್ಣ ಸವಡಿ, ತಿಪ್ಪಣ್ಣ ಮಜ್ಜಗಿ, ಸಂಘದ ಉಪಾಧ್ಯಕ್ಷ ಕಲ್ಮೇಶ ಮಂಡ್ಯಾಳ, ಪ್ರದಾನ ಕಾರ್ಯದರ್ಶಿ ಶಿವರಾಮ ಅಸುಂಡಿ, ಖಜಾಂಚಿ ಮೆಹಬೂಬ ಮುನವಳ್ಳಿ, ಕಾರ್ಯದರ್ಶಿಗಳಾದ ಯಲ್ಲಪ್ಪ ಸೋಲಾರಗೊಪ್ಪ, ಸಂತೋಷ ಅರಳಿ, ಸದಸ್ಯರಾದ ವಿನಾಯಕ ಪೂಜಾರಿ, ಮಹೇಶ ಭೋಜಗಾರ, ಪಾಂಡುರಂಗ ಉಪ್ಪಾರ, ಹಿರಿಯ ಪತ್ರಕರ್ತರಾದ ಮಹೇಂದ್ರ ಚವ್ಹಾಣ, ಮಲ್ಲಿಕಾರ್ಜುನ ಪಟ್ಟೇದ, ಶಿವಕುಮಾರ ಪತ್ತಾರ, ಪ್ರಕಾಶ ಹಿರೇಮಠ, ಶಿವಾಜಿ ಲಾತೂರಕರ್, ಆನಂದ ಪತ್ತಾರ, ಪ್ರಕಾಶ ಮುಳ್ಳೊಳ್ಳಿ, ಭರತ್ ಮಂಗಳಗಟ್ಟಿ ಮತ್ತಿತರರು ಉಪಸ್ಥಿತರಿದ್ದರು.