ಹುಬ್ಬಳ್ಳಿ : ನಗರದ ಉಣಕಲ್ ಕ್ರಾಸ್ ಬಳಿ ಇರುವ ರಾಯಲ್ ಓಕ್ ಪರ್ನಿಚರ್ ಶೋರೂಮ್ ಉದ್ಘಾಟನೆಯನ್ನು ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ನೆರವೇರಿಸಿದರು.
ಈಗಾಗಲೇ ದೇಶದ ವಿವಿಧೆಡೆ 120 ಸ್ಟೋರ್ ಗಳನ್ನು ಹೊಂದಿರುವ ರಾಯಲ್ ಓಕ್ ಗ್ರಾಹಕರ ನೆಚ್ಚಿನ, ವಿಶ್ವಾಸಾರ್ಹ ಸಂಸ್ಥೆಯಾಗಿದೆ. ಅದರಂತೆ ಹುಬ್ಬಳ್ಳಿ-ಧಾರವಾಡದ ಜನತೆಗೆ ಅನುಕೂಲವಾಗಲೆಂದು ನೂತನ ಶೋರೂಮ್ ಪ್ರಾರಂಭಿಸಲಾಗಿದೆ.
ಶೋರೂಮ್ ಉದ್ಘಾಟಿಸಿ ವೀಕ್ಷಣೆ ಬಳಿಕ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಯಲ್ ಓಕ್ ಶೋ ರೂಂ ಭಾರತದಲ್ಲಿ ಅತಿ ದೊಡ್ಡ ಮಳಿಗೆಗಳನ್ನು ಹೊಂದಿದೆ, ಈದೀಗ ಹುಬ್ಬಳ್ಳಿಯಲ್ಲಿ ಆರಂಭವಾಗಿದೆ. ಇದರ ಸದುಪಯೋಗವನ್ನು ಹುಬ್ಬಳ್ಳಿ – ಧಾರವಾಡ ಜನತೆ ಪಡೆದುಕೊಳ್ಳಬೇಕು ಎಂದರು.
ರಾಯಲ್ ಓಕ್ ಚೇರ್ಮನ್ ವಿಜಯ ಸುಬ್ರಮಣ್ಯ ಮಾತನಾಡಿ, ಪರ್ನಿಚರ್ ಮಳಿಗೆಯಲ್ಲಿ ಹಲವು ವೈವಿಧ್ಯಮಯ ವಸ್ತುಗಳಿದ್ದು, ಎಲ್ಲಾ ವಸ್ತುಗಳ ಮೇಲೆ ರಿಯಾಯಿತಿ ಹಾಗೂ ಇಎಮ್ ಐ ಸೌಲಭ್ಯ ಸಿಗಲಿದೆ ಎಂದು ಅವರು ಉಚಿತ ಹೋಂ ಡೆಲವರಿ ಇರಲಿದೆ ಎಂದರು.
ಈ ಸಂದರ್ಭದಲ್ಲಿ ರಾಯಲ್ ಓಕ್ ನ ಕಿರಣ್ ಚಾರ್ಬಿಯಾ, ಮ್ಯಾನಜಿಂಗ್ ಡ್ಯಾರಕ್ಟರ್ ಮಥನ್ ಸುಬ್ರಮಣ್ಯ, ಹೆಡ್ ಪ್ಯಾಂಚಸ್ಸಿ ರಿತೇಶ್ ಸಾಲಿನ್ ಹಾಗೂ ಶೋರೂಮ್ ಸಿಬ್ಬಂದಿಗಳು ಉಪಸ್ಥಿತರಿದ್ದರು.