ಸಿಕ್ಕಿದ್ದ ಮೊಬೈಲ್ ಫೋನ್ ಮರಳಿಸಿ ಮಾನವೀಯತೆ..
ಹುಬ್ಬಳ್ಳಿ: ಬಿಟ್ಟಿ ದುಡ್ಡು ಅಥವಾ ಬೆಲೆ ಬಾಳುವ ವಸ್ತುಗಳು ಸಿಕ್ಕಿತೆಂದರೆ ಜೇಬಿಗಿಳಿಸಿ ಖುಷಿ ಪಡುವವರೇ ಹೆಚ್ಚು. ಅಂತದ್ದರಲ್ಲಿ ಹುಬ್ಬಳ್ಳಿಯ ಆಟೋ ಡ್ರೈವರ್ವೊಬ್ಬರು ಸಾವಿರಾರು ರೂಪಾಯಿ ಬೆಲೆಬಾಳುವ ಮೊಬೈಲ್ ಅನ್ನು ವಾರಸುದಾರನಿಗೆ ನೀಡಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಹೌದು, ನಗರದ ನಿವಾಸಿ ಚಿತ್ತರಂಜನ್ ಎಂಬುವವರು ಹಳೇಬಸ್ ನಿಲ್ದಾಣದ ಬಳಿ ಆಟೋದಲ್ಲಿ ಸುಮಾರು 80 ಸಾವಿರ ಮೌಲ್ಯದ ಫೋನ್ ಬಿಟ್ಟು ಹೋಗಿದ್ದರು. ನಂತರ ಮರೆತು ಹೋದ ಫೋನ್ ಗಮನಿಸಿದ ಆಟೋ ಚಾಲಕ ರಾಜು ಮಲ್ಲೇಶಪ್ಪ ಹನುಮಶೆಟ್ಟರ್
ಫೋನ್ ಅನ್ನು ಮರಳಿ ನೀಡುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಆಟೋ ಚಾಲಕ ತನ್ನ ಆಟೋದಲ್ಲಿ ಬಳಿ ಸಿಕ್ಕ ಮೊಬೈಲ್ ಅನ್ನು ಉಪನಗರ ಪೊಲೀಸ್ ಠಾಣೆಗೆ ನೀಡಿದ್ದು, ಈ ವೇಳೆ ಪೊಲೀಸರು ತನಿಖೆ ನಡೆಸಿ ವಾರಸುದಾರ ಚಿತ್ತರಂಜನಗೆ ಮರಳಿಸಿದ್ದಾರೆ. ಆಟೋ ಚಾಲಕ ರಾಜು ಹನುಮಶೆಟ್ಟರ್ ಕಾರ್ಯಕ್ಕೆ ಉಪನಗರ ಠಾಣೆಯ ಇನ್ಸ್ಪೆಕ್ಟರ್ ರವಿಚಂದ್ರನ್ ಡಿ.ಬಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಲ್ಲದೇ ಸಾರ್ವಜನಿಕರಿಂದಲೂ ಸಹ ಶ್ಲಾಘನೆ ವ್ಯಕ್ತವಾಗುತ್ತಿದೆ.
ಫೋನ್ ಮರಳಿಸುವ ಸಂದರ್ಭದಲ್ಲಿ ಉಪನಗರ ಠಾಣೆಯ ಎ.ಎಸ್.ಐ ಕೆ.ವಿ.ಚಂದಾವರಕರ್, ಕುಮಾರ ಬಾಗವಾಡ ಸೇರಿದಂತೆ ಮುಂತಾದವರು ಇದ್ದರು.