Top Newsಅಪರಾಧಜಿಲ್ಲೆರಾಜ್ಯ
Trending

ಹುಡಾ: ಸತ್ತವರ ಹೆಸರಿನಲ್ಲಿ ಜಾಗ ಖರೀದಿ, ಮಾರಾಟ ಪ್ರಕರಣ…

ಹುಬ್ಬಳ್ಳಿ: ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ತನ್ನ ವ್ಯಾಪ್ತಿಯ ಹುಬ್ಬಳ್ಳಿ ಶರಹದ ಲೋಹಿಯಾನಗರದಲ್ಲಿ “ಶಾಂತಾ ಪಟ್ಟಣಶೆಟ್ಟಿ” ಎಂಬಾತರಿಗೆ ನೀಡಿರುವ ಭೂಮಿಯನ್ನು ಅಕ್ರಮವಾಗಿ ಸತ್ತವರ ಹೆಸರಿನಲ್ಲಿನ ಜಾಗವನ್ನು ಖರೀದಿ ಮಾಡಿದಲ್ಲದೇ ಕಾನೂನು ಉಲ್ಲಂಘಿಸಿ ಮಾರಾಟ ಮಾಡಿರುವ ಪ್ರಕರಣದ ಕುರಿತು ನಿಮ್ಮ ದಿನವಾಣಿ ಸುದ್ದಿ ಬಿತ್ತರಿಸಿ ಕಾನೂನು ಕ್ರಮವಾಗುವಂತೆ ಮಾಡಿರುವ ವಿಷಯ ನಿಮಗೆ ಗೊತ್ತಿರುವ ವಿಚಾರ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹುಡಾ ಆಯುಕ್ತ ಸಂತೋಷ ಬಿರಾದಾರ ಅವರು, ಉಪನಗರ ಠಾಣೆಯಲ್ಲಿ ದೂರು ಸಲ್ಲಿಸಿ ಪ್ರಕರಣವನ್ನು ತನಿಖೆಗೆ ತಿಳಿಸಿದ್ದಾರೆ.

ಇದೀಗ ಈ ಪ್ರಕರಣವನ್ನು ತನಿಖೆ ಮಾಡಿರುವ ಪೊಲೀಸರು ಆರೋಪಿ ಮನೋಜ್ ಫಕ್ಕಿರಪ್ಪ ತೊಟಗೇರ, ಸುನಿಲ್ ಪರಸಪ್ಪ ಚಿಕ್ಕಲಗಿ, ನಿತಿನಕುಮಾರ ಪರಸಪ್ಪ ಬೊಸ್ಲೆ, ಸಂಜಯ ಕಲಬುರಗಿ ಎಂಬಾತರನ್ನು ಬಂಧಿಸಿ ಜೈಲಿಗೆ ಅಟ್ಟುವ ಕೆಲಸ ಮಾಡಿದ್ದಾರೆ.

ಆದರೆ ಪ್ರಕರಣ ನಡೆದು ತಿಂಗಳುಗಟ್ಟಲೆ ಕಳೆಯುತ್ತಾ ಬಂದಿದೆ. ಇಷ್ಟೆಲ್ಲಾ ಅಕ್ರಮ ಹೊರಬಂದರು ಕೂಡಾ ಹುಡಾ ಆಯುಕ್ತರು, ಅಧ್ಯಕ್ಷರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಈ ಬಗ್ಗೆ ತಲೆ ಕೆಡಿಸಿಕೊಳ್ಳದೇ, ಜಾನ ಮೌನಕ್ಕೆ ಜಾರಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಸತ್ತು ಸ್ವರ್ಗದಲ್ಲಿರುವ ಶಾಂತಾ ಪಟ್ಟಣಶೆಟ್ಟಿ ಅವರಿಗೆ ವಾರಸುದಾರರಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಅಧಿಕಾರಗಳು ಕೂಡಾ ಇದನ್ನು ಒಪ್ಪಿಕೊಂಡಿದ್ದಾರೆ. ಆದರೂ ಸಹ ಹುಡಾ ಈ ಪ್ಲಾಟ್’ನ್ನು ತನ್ನ ಕಜ್ಬಾಕ್ಕೆ ಈವರೆಗೆ ಯಾಕೆ ಮಾಡಿಕೊಂಡಿಲ್ಲ ಎಂಬ ಪ್ರಶ್ನೆಯನ್ನು ಹುಬ್ಬಳ್ಳಿ-ಧಾರವಾಡ ನಾಗರಿಕರು ಮಾಡುತ್ತಿದ್ದಾರೆ.

ಮತ್ತೊಂದೆಡೆ ಆರೋಪಿಗಳು ಪ್ಲಾಟ್ ಖರೀದಿಗೆ ಬಳಸಿದ ನಕಲಿ ಸೀಲ್, ಪ್ಯಾಡ್, ಮೊಬೈಲ್ ಸೇರಿದಂತೆ ಕೃತ್ಯಕ್ಕೆ ಬಳಸಿದ ವಸ್ತುಗಳನ್ನು ಪೊಲೀಸರು ಜಪ್ತಿಮಾಡಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ದೃಢೀಕರಣಕ್ಕಾಗಿ ಎಫ್ಎಸ್ ಎಲ್ ಗೆ ಕಳಿಸಿದ್ದಾರೆ. ಆದರೆ ಈವರೆಗೆ ಕೂಡಾ ಈ ವರದಿ ಏನಾಯಿತು ಎಂಬುದೇ ಯಕ್ಷಪ್ರಶ್ನೆಯಾಗಿ ಉಳಿದಿದೆ.

ಇಷ್ಟೆಲ್ಲಾ ಅಕ್ರಮ ಮಾಡಿಯೂ ಸಹಿತ ಆರೋಪಿಗಳು ಮಾತ್ರ ರಾಜಾರೋಷವಾಗಿ ಜಾಮೀನು ಪಡೆದು ತಮ್ಮ ಹಳೆಯ ಚಾಳಿಯನ್ನು ಮುಂದುವರೆಸಿದ್ದಾರೆ.

ಈ ಬಗ್ಗೆ ನಿಮ್ಮ “ದಿನವಾಣಿ” ಮುಂದಿನ ದಿನಗಳಲ್ಲಿ ಹು-ಧಾ ಮತ್ತಷ್ಟು ಅಕ್ರಮಗಳನ್ನು ದಾಖಲೆಗಳ ಸಮೇತವಾಗಿ ಹೊರಹಾಕಲಿದೆ ನಿರೀಕ್ಷಿಸಿ….

ಅಷ್ಟೇ ಅಲ್ಲದೇ ಇಂತಹ ಅಕ್ರಮಗಳಿಗೆ ಸಾಥ್ ಕೊಟ್ಟಿರುವ ಅಧಿಕಾರಿಗಳು, ಮಧ್ಯವರ್ತಿಗಳ ಇಂಚಿಂಚು ಮಾಹಿತಿಯನ್ನು ಮುಂದಿನ ದಿನಗಳಲ್ಲಿ ಬಹಿರಂಗಗೊಳಿಸಲಿದೆ.

ಇದು ದಿನವಾಣಿ Exclusive story….

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button