ಹುಬ್ಬಳ್ಳಿ: ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿ ಪಡಿಸಿರುವ ಪ್ರತಿಷ್ಠಿತ ಬಡಾವಣೆಗಳ ಮೂಲೆ ನಿವೇಶನಗಳ / ಬಿಡಿ ನಿವೇಶನಗಳ ಇ-ಹರಾಜು ಪ್ರಕ್ರಿಯೆಯನ್ನು ಅ.2 ರಂದು ಕರೆಯಲಾಗಿತ್ತು. ಆದರೆ ತಾಂತ್ರಿಕ ಕಾರಣದಿಂದಾಗಿ ಈ ಪ್ರಕ್ರಿಯೆಯನ್ನು ಕೈಬಿಟ್ಟು ಪುನರ್ ಹರಾಜು ಪ್ರಕ್ರಿಯೆಯನ್ನು ಆರಂಭಿಸಲಾಗುವುದು ಎಂದು ಹುಡಾ ಅಧ್ಯಕ್ಷ ಶಾಕೀರ್ ಸನದಿ ತಿಳಿಸಿದ್ದಾರೆ.
ಶಾಕೀರ್ ಸನದಿ, ಅಧ್ಯಕ್ಷರು, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ
ಈಗಾಗಲೇ ಲಕಮ್ಮನಹಳ್ಳಿ, ತಡಸಿನಕೊಪ್ಪ, ಬೈರಿದೇವರಕೊಪ್ಪದಲ್ಲಿ ಭೂಮಿ ಅಭಿವೃದ್ಧಿ ಪಡಿಸಿ, ಹರಾಜು ಪ್ರಕ್ರಿಯೆ ನಡೆಸಲು ಸಿದ್ದತೆ ನಡೆಸಲಾಗಿತ್ತು. ಈ ಕುರಿತು ಪತ್ರಿಕಾ ಪ್ರಕಟಣೆ ಕೂಡಾ ಹೊರಡಿಸಿ ಆಸಕ್ತರಿಂದ ಇ-ಹರಾಜಿನಲ್ಲಿ ಭಾಗವಹಿಸಲು ತಿಳಿಸಲಾಗಿತ್ತು.
ಈ ಪ್ರಕ್ರಿಯೆಯು ಅ.3 ರಿಂದ ಆರಂಭವಾಗಿ ಅ.25 ರವರೆಗೆ ಹಜಾರಿನಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಳ್ಳಲು ತಿಳಿಸಲಾಯಿತು. ಆದರೆ ಅ.23 ರಂದೇ ನೊಂದಣಿ ಸಾಫ್ಟ್‌ವೇರ್’ನಲ್ಲಿ ತಾಂತ್ರಿಕ ತೊಂದರೆ ಉಂಟಾಗಿದೆ. ಇದರಿಂದ ನೊಂದಣಿದಾರರು ಆನ್ಲೈನ್’ನಲ್ಲಿ ಪ್ರಾಧಿಕಾರಕ್ಕೆ ಹಣ ತುಂಬಿ ಆತಂಕಕ್ಕೆ ಒಳಗಾಗಿದ್ದರು.
ಹೊಸ ನೋಂದಣಿದಾರರು ಸಹಿತ ನೊಂದಣಿ ಮಾಡಿಕೊಳ್ಳಲು ಸಾಕಷ್ಟು ಪಡಿಪಾಡಿಲು ಅನುಭವಿಸುವಂತಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ವು.
ಇದೀಗ ತಾಂತ್ರಿಕ ಕಾರಣವನ್ನು ಅರಿತುಕೊಂಡಿರುವ ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ಮತ್ತೊಂದು ಇ-ಹರಾಜು ಪ್ರಕ್ರಿಯೆ ನಡೆಸಲು ತೀರ್ಮಾನಿಸಿದೆ.
ಈ ಬಗ್ಗೆ ಹುಡಾ ಅಧ್ಯಕ್ಷರೇ ಮಾಧ್ಯಮಕ್ಕೆ ಮಾಹಿತಿ ನೀಡಿದ್ದು, ಇ-ಹರಾಜು ಪ್ರಕ್ರಿಯೆ ಸಾಪ್ಟ್ ವೇರ್ ನಲ್ಲಿ ತಾಂತ್ರಿಕ ತೊಂದರೆ ಎದುರಾಗಿದೆ. ಇದು ಸಾರ್ವಜನಿಕರು ನೀಡಿದ ದೂರಿನಿಂದ ಗಮನಕ್ಕೆ ಬಂದಿದೆ. ಈಗಾಗಲೇ ನೋಂದಣಿ ಮಾಡಿಕೊಂಡ ಜನರ ಹಣವನ್ನು ವಾಪಾಸ್ ನೀಡಿ, ಪುನಃ ಇ-ಹರಾಜು ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಸಂತೋಷ ಬಿರಾದಾರ, ಆಯುಕ್ತರು, ಹುಡಾ
ಇನ್ನೂ ಹುಡಾ ಆಯುಕ್ತರು ಸಹಿತ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಟೆಕ್ನಿಕಲ್ ಕಾರಣದಿಂದ ನೊಂದಣಿ ಕಾರ್ಯ ಸ್ಥಗಿತಗೊಂಡಿದೆ. ಈಗಾಗಲೇ ನಾವು ಕೂಡಾ ಸರ್ಕಾರಕ್ಕೆ ವಿಷಯ ತಿಳಿಸಿದ್ದೇವೆ. ಆದಷ್ಟು ಬೇಗ ಸಮಸ್ಯೆ ಪರಿಹರಿಸಲಾಗುವುದು. ಅಷ್ಟೇ ಅಲ್ಲದೇ ಇ-ಹರಾಜು ಪ್ರಕ್ರಿಯೆಯನ್ನು ವಾಪಾಸ್ ಕರೆಯಲಾಗುವುದು ಎಂದು ತಿಳಿಸಿದ್ದಾರೆ.