ಹುಬ್ಬಳ್ಳಿ: ನಗರದಲ್ಲಿ ಬೈಕ್’ಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಖತರ್ನಾಕ ಕಳ್ಳನನ್ನು ಬಂಧಿಸುವಲ್ಲಿ ಶರಹ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಘಂಟಿಕೇರಿಯ ಎಲಿಪೇಟೆಯ ಮಾರುತಿ ಯರಗಟ್ಟಿ (34) ಎಂದು ಗುರುತಿಸಲಾಗಿದೆ. ಕಳೆದ ಡಿ.12 ರಂದು ಹುಬ್ಬಳ್ಳಿಯ ರೈಲ್ವೆ ಸ್ಟೇಶನ್ ಹತ್ತಿರ ನಿಲ್ಲಿಸಿದ ಹೊಂಡಾ ಡಿಯೋ ಸ್ಕೂಟರ್’ನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಶರಹ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಪ್ರಕರಣ ದಾಖಲಿಸಿಕೊಂಡು ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಎಮ್.ಎಮ್.ತಹಶಿಲ್ದಾರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಸದ್ಯ ಬಂಧಿತನಿಂದ 90 ಸಾವಿರ ಮೌಲ್ಯದ 2 ಬೈಕ್’ಗಳನ್ನು ವಶಕ್ಕೆ ಪಡೆಯಲಾಗಿದ್ದು, ಹೆಚ್ಚಿನ ವಿಚಾರಣೆ ಮಾಡಲಾಗುತ್ತಿದೆ.
ಈ ಕಾರ್ಯಾಚರಣೆಯಲ್ಲಿ ಠಾಣೆಯ ಪಿಎಸ್ಐ ವಿನೋದ್ ದೊಡ್ಡಲಿಂಗಪ್ಪನವರ, ಮಾರುತಿ ಆರ್, ಎಎಸ್ಐ ವಾಯ್.ಎಸ್.ಗೌರಿ, ಸಿಬ್ಬಂದಿ ಎಎಸ್ಐ ದಾಸಣ್ಣವರ, ಈಶ್ವರ ಕುರುವಿನಶೆಟ್ಟಿ, ವಾಯ್.ಎಮ್.ಶೇಂಡ್ಗೆ, ವಿಠ್ಠಲ ಭೋವಿ, ಶಂಕರಗೌಡಾ ಹೊಸಮನಿ, ರಾಮರಾವ್ ರಾಠೋಡ, ರವಿ ಕೆಂದೂರ, ಸುಧಾಕರ ನೇಸೂರ, ಕನಕಪ್ಪ ರಗಣಿ, ರುದ್ರಪ್ಪ ಹೊರಟ್ಟಿ, ಬಿ.ಎಸ್.ಅವಟಿ ಇದ್ದಾರೆ. ಇವರ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಶಿಸಿದ್ದಾರೆ.