ಹುಬ್ಬಳ್ಳಿ: ವಾಹನಗಳ ದಾಖಲೆ ತಪಾಸಣೆ ನೆಪದಲ್ಲಿ ಸಂಚಾರಿ ಪೋಲಿಸ ಎಎಸ್ಐವೊಬ್ಬರು ಹಣ ಪಡೆದ ಆರೋಪ ಕೇಳಿ ಬಂದಿದ್ದು, ಇದಕ್ಕೆ ಪುಷ್ಟೀಕರಣ ಎಂಬಂತೆ ವಿಡಿಯೋವೊಂದು ವೈರಲ್ ಆಗುತ್ತಿದೆ.
ಹುಬ್ಬಳ್ಳಿಯ ದೇಶಪಾಂಡೆ ನಗರದ ರೋಟರಿ ಶಾಲೆಯ ಮುಂಭಾಗದಲ್ಲಿ ವಾಹನಗಳ ದಾಖಲಾತಿಗಳನ್ನು ತಪಾಸಣೆ ನೆಪದಲ್ಲಿ ಉತ್ತರ ಸಂಚಾರಿ ಪೋಲಿಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಎಎಸ್’ಐವೊಬ್ಬರು ವಾಹನ ಚಾಲಕನಿಂದ 200 ರೂಪಾಯಿ ಲಂಚ ಪಡೆಯುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಸದ್ಯ ದಾಖಲಾತಿಗಳ ತಪಾಸಣೆ ನೆಪದಲ್ಲಿ ಹಣ ಪಡೆದ ಎಎಸ್ಐ ಮೇಲೆ ನೂತನ ಕಮಿಷನರ್ ಸಂತೋಷ ಬಾಬು ಯಾವ ರೀತಿಯಾಗಿ ಕ್ರಮ ಕೈಗೊಳ್ಳತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1