
ಹುಬ್ಬಳ್ಳಿ: ಇನ್ನೇನು ಕೈಯಲ್ಲಿದ್ದ ತುತ್ತು ಬಾಯಿಗೆ ಹಾಕಿಕೊಳ್ಳಬೇಕೆನ್ನುವಷ್ಟರಲ್ಲಿ ಅದು ಜಾರಿ ಬಿತ್ತು..!
ಹೀಗಾದಾಗ ಎಷ್ಟು ನಿರಾಶೆ, ವೇದನೆ ಆಗುತ್ತದೆ ಹೇಳಿ. ತುಂಬಾ ತುಂಬಾ ವೇದನೆ… ನಿರಾಶೆ.. ಹಳಹಳಿಕೆ..ಅಗುತ್ತದೆ ಆಗುತ್ತದೆ ಅಲ್ವೇ…
ಛೇ… ಹೀಗಾಗಬಾರದಿತ್ತು ಎಂದು ಕಳವಳ ವ್ಯಕ್ತಪಡಿಸಿದವರು ಹಲವರು.
ಆಗಷ್ಟೇ ರಾಜ್ಯದಲ್ಲಿ ಹೊಸ ಸರಕಾರ ಅಸ್ತಿತ್ವಕ್ಕೆ ಬಂದು ಒಂದೂವರೆ ತಿಂಗಳಾಗಿತ್ತು. ಆಂದ್ರೆ 2023 July ತಿಂಗಳು.
ಆಗ ಪಾಲಿಕೆ ಕಮಿಷನರ್ ಆಗಿದ್ದ ಐಎಎಸ್ ಕೇಡರ್ ನ ಡಾ.ಗೋಪಾಲಕೃಷ್ಣ ಅವರು ಚಿಕ್ಕಮಗಳೂರು ಜಿಪಂ ಸಿಇಒ ಅಗಿ ವರ್ಗಗೊಂಡರು.
ಅವರು ವರ್ಗವಾಗುತ್ತಿದ್ದಂತೆ ಕಮಿಷನರ್ ಹುದ್ದೆಗೆ ಭಾರೀ ಪೈಪೋಟಿ ನಡೆದಿತ್ತು.
ಇದಕ್ಕೆ ಕೆಎಎಸ್ ಸೂಪರ್ ಟೈಂ ಸ್ಕೇಲ್ ದರ್ಜೆಯ ಡಾ.ರುದ್ರೇಶ ಘಾಳಿ ದೊಡ್ಡ ಮಟ್ಟದ ಆಕಾಂಕ್ಷಿಯಾಗಿದ್ದರು. ಇನ್ನೇನು ಆದೇಶ ಪತ್ರ ಹೊರಬೀಳುವುದಿತ್ತು.
ಅಲ್ಲಿಯವರೆಗೂ ಗುಪ್ತ ಗಾಮಿನಿಯಾಗಿದ್ದ ಡಾ. ಈಶ್ವರ ಉಳ್ಳಾಗಡ್ಡಿ ರಾತ್ರೋ ರಾತ್ರಿ ಬಿರುಗಾಳಿ ಯಂತೆ ಬಂದು ‘ಭಾರಿ ಪೈಪೋಟಿ’ ಗೆದ್ದು ಆದೇಶ ಪತ್ರ ಪಡೆದು ಮಾರನೆ ದಿನವೇ ಪಾಲಿಕೆ ಕಮಿಷನರ್ ಆಗಿ ಚಾರ್ಜ್ ಪಡೆದರು.
ಅನುಭವ ಮತ್ತು ಕೇಡರ್ ನಲ್ಲಿ ಸೀನಿಯರ್ ಆಗಿರುವ ಡಾ.ರುದ್ರೇಶ ಘಾಳಿ ಅವರು ಕಟ್ಟಿಕೊಂಡಿದ್ದ ಹು-ಧಾ ಕಮಿಷನರ್ ಆಗುವ ಕನಸು ಬಿರುಗಾಳಿಗೆ ಕೊಚ್ಚಿ ಹೋಯಿತು.
ಕೊನೆಗೆ ಸಿಕ್ಕಿದ್ದು ಗಾಳಿ ಗೋಪುರದಂತಿದ್ದ ಸ್ಮಾರ್ಟ್ ಸಿಟಿ ಎಂಡಿ ಕುರ್ಚಿ. ಆದರೂ ರುದ್ರೇಶ, ಹುಬ್ಬಳ್ಳಿ ಧಾರವಾಡ ಕಮಿಷನರ್ ಆಗಬೇಕೆಂಬ ಮಹತ್ವಾಕಾಂಕ್ಷೆಗಾಗಿ ಒಂದೂವರೆ ವರ್ಷ ತಾಳ್ಮೆಯಿಂದ ಕಾದು ಆಸೆಯನ್ನು ಈಡೇರಿಸಿಕೊಂಡರು.
ಪೈಪೋಟಿ ಗೆದ್ದು ಬಂದಿದ್ದ ಡಾ.ಈಶ್ಚರಗೆ ಜಾರ್ಚ್ ತಗೊಂಡು ಪಾಲಿಕೆಯ ಸ್ಥಿತಿಗತಿ ಕಂಡು ಕಂಗಾಲಾಗಿದ್ದು ಸುಳ್ಳಲ್ಲ. ಯಾಕಾದರೂ ಬಂದೆನೋ ಅಂತ ಕನವರಿಸಿಕೊಂಡು ಹಲವರ ಮುಂದೆ ಅಲವತ್ತುಕೊಂಡಿದ್ದರು ಕೂಡ. ಕಾಲ ಮಿಂಚಿ ಹೋಗಿತ್ತು.
ತಾಳ್ಮೆಯಿಂದ ಕಾದಿದ್ದ ರುದ್ರೇಶ ಸುಗ್ರಾಸ ಯೋಜನೆಗಳ ಹೆಬ್ಬಾಗಿಲು ತೆರೆದಿದೆ.
ಶೀಘ್ರದಲ್ಲೇ ಐಎಎಸ್ ಗೆ ಪ್ರಮೋಷನ್ ಹೊಂದಲಿರುವ ರುದ್ರೇಶ ಗೆ ಒಳ್ಳೆಯದಾಗಲಿ.
ಇನ್ನಷ್ಟು INSIDE ಸುದ್ದಿಗಾಗಿ ಮುಂದಿನ ಸಂಚಿಕೆ ನಿರೀಕ್ಷಿಸಿ….