ಹುಬ್ಬಳ್ಳಿ: ವಿದ್ಯಾನಿಕೇತನ ಕಾಲೇಜು ರಾಜ್ಯಕ್ಕೆ 6 ರ್ಯಾಂಕ್….

ಹುಬ್ಬಳ್ಳಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಭೈರಿದೇವರಕೊಪ್ಪದ ಚೌಗಲಾ ಶಿಕ್ಷಣ ಸಂಸ್ಥೆಯ ವಿದ್ಯಾನಿಕೇತನ ವಿಜ್ಞಾನ ಪದವಿ ಪೂರ್ವ ಕಾಲೇಜ್ ವಿದ್ಯಾರ್ಥಿ ಸುಮಿತ್ ರಾಶಿನಕರ್ ಧಾರವಾಡ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ 6ನೇ ರಾಂಕ್ ಪಡೆದಿದ್ದು, ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾರೆ. ಅಲ್ಲದೆ, ಸಂಸ್ಥೆಯು ಸತತ 16ನೇ ಬಾರಿಗೆ ಧಾರವಾಡ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಕಾಯ್ದುಕೊಂಡಿದೆ ಎಂದು ಸಂಸ್ಥೆ ಕಾರ್ಯದರ್ಶಿ ಅನಿಲಕುಮಾರ ಚೌಗಲೆ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾತನಾಡಿದ ಅವರು, ಪರೀಕ್ಷೆಗೆ ಹಾಜರಾಗಿದ್ದ 639 ವಿದ್ಯಾರ್ಥಿಗಳೂ ತೇರ್ಗಡೆಯಾಗಿದ್ದಾರೆ. ಕನ್ನಡ ವಿಷಯದಲ್ಲಿ 24, ಭೌತಶಾಸ್ತ್ರ 11, ರಸಾಯನಶಾಸ್ತ್ರ 18, ಗಣಿತ 88, ಜೀವನಶಾಸ್ತ್ರ 94 ಹಾಗೂ ಸ್ಟಾಟಿಟಿಕ್ಸ್ ವಿಷಯದಲ್ಲಿ 75 ವಿದ್ಯಾರ್ಥಿಗಳು ಸೇರಿ ಒಟ್ಟು 169 ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ ಎಂದು ತಿಳಿಸಿದರು.
ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ವಿದ್ಯಾರ್ಥಿ ಮತ್ತು ಸುಮಿತ್ ಮಧ್ಯೆ ಕೆಲವೇ ಅಂಕಗಳ ವ್ಯತ್ಯಾಸವಿದೆ. ಎಲ್ಲ ವಿಷಯಗಳಲ್ಲೂ 100ಕ್ಕೆ 100 ಅಂಕ ಪಡೆದಿರುವ ಸುಮಿತ್ ಇಂಗ್ಲಿಷ್‌ನಲ್ಲಿ 95 ಮತ್ತು ರಸಾಯನಶಾಸ್ತ್ರದಲ್ಲಿ 99 ಅಂಕ ಪಡೆದಿದ್ದಾನೆ. ಹೀಗಾಗಿ ಈ ಎರಡೂ ವಿಷಯಗಳನ್ನು ಮರುಮೌಲ್ಯ ಮಾಪನಕ್ಕೆ ಹಾಕಲಾಗುವುದು. ಜಿಲ್ಲೆಯಲ್ಲಿ 37 ಟಾಪ್ ವಿದ್ಯಾರ್ಥಿಗಳ ಪೈಕಿ 25 ವಿದ್ಯಾರ್ಥಿಗಳು ನಮ್ಮ ವರೇ ಆಗಿದ್ದಾರೆ ಎಂದರು. ಇದೇ ವೇಳೆ ಬ್ಯಾಂಕ್ ಪಡೆದ ಸುಮಿತ್ ರಾಶಿನಕರ್ ಅವ-ರಿಗೆ ಸಂಸ್ಥೆಯ ಪರವಾಗಿ 1 ಲಕ್ಷ ರೂ. ನಗದು ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಚೇರ್ಮನ್ ಶ್ರೀದೇವಿ ಚೌಗಲಾ, ಪ್ರಾಚಾರ್ಯ ಡಾ. ಆನಂದ ಮುಳಗುಂದ ಗಂಗಾಧರ ಕುಮಡೊಳ್ಳಿ, ಡಾ. ರಮೇಶ ಭಂಡಿವಾಡ ಇದ್ದರು.
ವೈದ್ಯನಾಗುವ ಕನಸು ಕಂಡಿದ್ದೇನೆ
ಉತ್ತಮ ಕಲಿಕಾ ವಾತಾವರಣ ಈ ಸಂಸ್ಥೆಯಲ್ಲಿದೆ. ಶಿಕ್ಷಕರು ಮತ್ತು ಉತ್ತಮ ಗ್ರಂಥಾಲಯದ ಸಹಕಾರದಿಂದ ಸಾಧನೆ ಸಾಧ್ಯವಾಯಿತು. ಪ್ರತಿ ವಾರ ಪರೀಕ್ಷೆಗಳನ್ನು ನಡೆಸುವ ಮೂಲಕ ಬೋಧಕರು ಪರೀಕ್ಷಾ ಭಯ ಹೋಗಲಾಡಿಸಿದ್ದರು. ನೀಟ್ ಪರೀಕ್ಷೆ ಬರೆದು ಮುಂದೆ ವೈದ್ಯನಾಗುವ ಕನಸು ಹೊಂದಿದ್ದೇನೆ.
– ಸುಮಿತ್ ರಾಶಿನಕರ್, ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ 6ನೇ ಯಾಂಕ್ ಪಡೆದ ವಿದ್ಯಾರ್ಥಿ