ಹುಬ್ಬಳ್ಳಿ: ಗೋಕುಲರೋಡ ಪೊಲೀಸ ಠಾಣೆಯ ಚುರುಕು ಕಾರ್ಯಾಚರಣೆಯಲ್ಲಿ ಭಾರೀ ಹಣದ ಬಲವಂತ ವಸೂಲಿ ಪ್ರಯತ್ನ ಪತ್ತೆ!
ಹುಬ್ಬಳ್ಳಿ: ಗೋಕುಲರೋಡ ಪೊಲೀಸ ಠಾಣೆಯ ಚುರುಕು ಕಾರ್ಯಾಚರಣೆಯಲ್ಲಿ ಭಾರೀ ಹಣದ ಬಲವಂತ ವಸೂಲಿ ಪ್ರಯತ್ನ ಪತ್ತೆ!
ಮಂಜುನಾಥ ಹದ್ದಣ್ಣನವರ (ಸಾ: ಗದಗ ಬೇಟಗೇರಿ) ನೇತೃತ್ವದ ತಂಡವು ಸಮೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧಿಕಾರಿಗಳಿಂದ ಬೆದರಿಕೆ ಹಾಕಿ ಹಣ ವಸೂಲಿಗೆ ಯತ್ನಿಸಿದ ಪ್ರಕರಣದಲ್ಲಿ ಐದು ಮಂದಿ ಬಂಧಿತರಾಗಿದ್ದಾರೆ.
ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಗುನ್ನಾ ನಂ: 153/2025, ಕಲಂ 308(2), 62 ಬಿ.ಎನ್.ಎಸ್. ಕಾಯ್ದೆ 2023 ಅಡಿಯಲ್ಲಿ ಮೊದಲು ದಾಖಲಾಗಿದ್ದ ಪ್ರಕರಣದ ತನಿಖೆಯಲ್ಲಿರುವಾಗ, ಆರೋಪಿತ ಮಂಜುನಾಥ ಹದ್ದಣ್ಣನವರ ಪುನಃ ಫಿರ್ಯಾದಿದಾರರನ್ನು ಸಂಪರ್ಕಿಸಿ “ನನಗೆ ಒಂದೂವರೆ ಕೋಟಿ ರೂಪಾಯಿ ಕೊಡಲೇಬೇಕು” ಎಂದು ನಿರಂತರವಾಗಿ ಒತ್ತಡ ಹಾಕುತ್ತಿದ್ದ.
ನಿನ್ನೆ (ದಿನಾಂಕ: 05-11-2025) ಸಂಜೆ ಹುಬ್ಬಳ್ಳಿಯ ಹೊಸ ಬಸ್ ನಿಲ್ದಾಣದ ಬಳಿ ಆರೋಪಿತ ಮಂಜುನಾಥ ತನ್ನೊಂದಿಗೆ ನಾಲ್ವರು ಸಹಚರರನ್ನು —
1️⃣ ವಿರೇಶ ಕುಮಾರ (ತಂದೆ ಮಹಾದೇಶ್ವರ ಲಿಂಗದಾಳ, ಸಾ: ಮುಂಡಗೋಡ)
2️⃣ ಮಹಾದೇಶ್ವರ (ತಂದೆ ಬಸವಣ್ಣೆಪ್ಪ ಲಿಂಗದಾಳ, ಸಾ: ಮುಂಡಗೋಡ)
3️⃣ ಮಹಾಬಲೇಶ್ವರ (ತಂದೆ ಮಂಕಾಳ ಶಿರೂರಕರ್, ಸಾ: ಮುಂಡಗೋಡ)
4️⃣ ಶಿವಪ್ಪ (ತಂದೆ ಫಕ್ಕೀರಪ್ಪ ಬೊಮ್ಮನಳ್ಳಿ, ಸಾ: ಮುಂಡಗೋಡ)
— ಕರೆದುಕೊಂಡು ಬಂದು, ಸೊಸೈಟಿಯ ಮ್ಯಾನೇಜರ್ ಮಂಜುನಾಥ ಸೊನ್ನದ ಇವರಿಂದ ಒಟ್ಟು ₹1,70,000 ಹಣವನ್ನು ಸ್ವೀಕರಿಸುತ್ತಿದ್ದ ವೇಳೆ, ಗೋಕುಲರೋಡ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ದಾಳಿ ನಡೆಸಿದ್ದಾರೆ.
ಪರಿವೀಕ್ಷಕ ಅಧಿಕಾರಿ ಪ್ರವೀಣ್ ನಿಲ್ಲಮನವರ ನೇತೃತ್ವದಲ್ಲಿ ನಡೆದ ಈ ದಾಳಿಯಲ್ಲಿ ಪೊಲೀಸರು ಆರೋಪಿತರನ್ನು ಸ್ಥಳದಲ್ಲೇ ವಶಕ್ಕೆ ಪಡೆದು, ₹1.70 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಪೊಲೀಸ್ ಅಧಿಕಾರಿಗಳು, “ಆರೋಪಿತರಿಂದ ಬಲವಂತದ ಹಣ ವಸೂಲಿಗೆ ಸಂಬಂಧಿಸಿದ ದಾಖಲೆ ಹಾಗೂ ಮೊತ್ತವನ್ನು ವಶಪಡಿಸಿಕೊಂಡು, ಮುಂದಿನ ತನಿಖೆ ಕೈಗೊಳ್ಳಲಾಗಿದೆ” ಎಂದು ತಿಳಿಸಿದ್ದಾರೆ.
ಈ ಪ್ರಕರಣವು ಗೋಕುಲರೋಡ ಪೊಲೀಸರ ಸೂಕ್ಷ್ಮ ತನಿಖೆ ಮತ್ತು ತ್ವರಿತ ಕಾರ್ಯಾಚರಣೆಯ ಮತ್ತೊಂದು ಉದಾಹರಣೆ ಎಂದೇ ಪರಿಗಣಿಸಲಾಗಿದೆ.
ವರದಿ ಶಶಿಕಾಂತ್ ಕೊರವರ




