Top Newsಅಪರಾಧಜಿಲ್ಲೆರಾಜ್ಯ

ಹುಬ್ಬಳ್ಳಿ: 45 ರೌಢಿಶೀಟರ್ ಗಳಿಗೆ ಗಡಿಪಾರು ಆದೇಶ…

ಹುಬ್ಬಳ್ಳಿ: ಹು-ಧಾ ಅವಳಿನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮುನ್ನೆಚ್ಚರಿಕಾ ಕ್ರಮವಾಗಿ ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕ್ರಿಮಿನಲ್ ಚಟುವಟಿಕೆಗಳಲ್ಲಿ ನಿರತರಾಗಿರುವ 45 ಮಂದಿ ರೌಡಿಶೀಟರ್‌ಗಳಿಗೆ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಗಡಿಪಾರು ಆದೇಶ ಹೊರಡಿಸಿದ್ದಾರೆ.

ಈ ರೌಡಿಶೀಟರ್‌ಗಳ ವಿರುದ್ಧ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದು, ಕೊಲೆ, ಸುಲಿಗೆ, ಮಾದಕ ವಸ್ತು ಮಾರಾಟ ಹಾಗೂ ಸೇವನೆ, ಮಟ್ಕಾ, ಭೂ ಮಾಫಿಯಾ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಭಾಗಿಯಾಗಿ ರೌಢಿಶೀಟರ್ ಗಳಿಂದ ಸಮಾಜದಲ್ಲಿ ಅಶಾಂತಿ ಉಂಟಾಗುವ ಸಾಧ್ಯತೆಗಳಿದ್ದು, ಈ ನಿಟ್ಟಿನಲ್ಲಿ ಶಾಂತಿಯನ್ನು ನೆಲೆಸಲು ಕ್ರಮ ಜರಗಿಸಲಾಗಿದೆ.

ಬರೋಬರಿ 45 ರೌಡಿ ಶೀಟರ್‌ಗಳ ವಿರುದ್ಧ ಗಡಿಪಾರು ಆದೇಶ ಮಾಡಲಾಗಿದೆ. ಆರೋಪಿಗಳನ್ನು ಬೀದರ್, ಯಾದಗಿರಿ, ದಕ್ಷಿಣ ಕನ್ನಡ, ಚಾಮರಾಜನಗರಗಳಿಗೆಸ್ಥಳಾಂತರಿಸಲಾಗಿದೆ. ಅಲ್ಲದೇ ಇವರ ಚಟುವಟಿಕೆಗಳ ಮೇಲೆ ನಿಕಟ ನಿಗಾ ಇರಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ಇಮ್ರಾನ್ ಅಲಿಯಾಸ್ ಕಟಗ ಮನಿಯಾರ್ (33), ಸೈಯದ್ ಸೊಹೆಲ್ ಅಲಿಯಾಸ್ ಅಡ್ಡ ಸೊಹೆಲ್ (21), ಖಾಜುಲೈನ್ ಕೋಟೂರ (24), ಅಮ್ಜದ್ ಶಿರಹಟ್ಟಿ (28,) ರಾಕೇಶ ಮದರಕಲ್ಲ (33) ಉದಯ ಕೆಲಗೇರಿ (24), ಅಶ್ಪಾಕ್ ಅತ್ತಾರ (40), ಮೆಹಬೂಬ್ ಸಾಬ (46), ರಾಹುಲ್ ಪ್ರಭು (35), ವಾಸುದೇವ ಕೊಲ್ಹಾಪುರ (46), ಪರಶುರಾಮ ಕಬಾಡೆ (60), ಮಹಮ್ಮದ್ ಅಜೀಜ್ ಬೇಪಾರಿ (27), ಆಂಜನೇಯ ಪೂಜಾರ (39), ಸುದೀಪ್ ಬಾರಕೇರ್ (21), ಅರ್ಜುನ ವಡ್ಡರ (23), ಅಕ್ಬರ್ ಬಿಜಾಪುರ (26), ವಿಶಾಲ ಬಿಜವಾಡ (25), ರಾಕೇಶ ಜಮಖಂಡಿ (32), ಸುನಿಲ್ ಮಾಳಗಿ (24), ಹಜರತ್ ಅಲಿ ಅಲಿಯಾಸ್ ಪಾಡಾ ಮಕಾಂದರ (22), ಸತೀಶ್ ಅಲಿಯಾಸ್ ಸತ್ಯಾ ಗೋಕಾವಿ (27), ಸಿದ್ದಪ್ಪ ಬಡಕಣ್ಣವರ (38), ಶಂಕರ ಅಥಣಿ (28),ರಾಜೇಶ ಅಲಿಯಾಸ್ ಬಾಂಡ್ ರಾಜಾ ನಾಗನೂರ (21), ಅರವಿಂದ ಭಜಂತ್ರಿ (28), ಕಾರ್ತಿಕ ಮದರಿಮಠ (22), ವಿಜಯಕುಮಾರ್ ಆಲೂರ್ (24), ಮಹಮ್ಮದ್ ಸಾಧಿಕ್ ಅಲಿಯಾಸ್ ಗಿಲಿಗಿಲಿ ಸಾದಿಕ ಬೆಟಗೇರಿ (28), ದಾದಾಫೀರ್ ಚೌಧರಿ (28), ಜುನೇದ್ ಅಲಿಯಾಸ್ ಡೈಮಂಡ್ ಮುಲ್ಲಾ (30), ಅಲ್ತಾಫ್ ಕರಡಿಗುಡ್ಡ (29), ಮಹಮ್ಮದ್ ಸಾಧಿಕ್ ಅಲಿಯಾಸ್ ಬಾಬಾಸಾಧಿಕ್ ಬೇಪಾರಿ (29), ಮಹಮ್ಮದ್ ಸಾಧಿಕ್ ಅಲಿಯಾಸ್ ಮ್ಯಾಟ್ನಿ ಸಾಧಿಕ್ ಮುನವಳ್ಳಿ (22), ಶಾದಾಬ ಕರಡಿಗುಡ್ಡ (32), ಚೇತನ ಮೆಟ್ಟಿ (30), ಕರ್ಣಾ ಮುಂಡಗೋಡ ( 28), ಇಮ್ರಾನ್ ಕಲಾದಗಿ (22), ಅಲ್ಲಾವುದ್ದೀನ್ ಅಲಿಯಾಸ್ ಡಲ್ಯಾ ನದಾಫ್ ( 39), ಸಿದ್ಧಾರ್ಥ ಹೆಗ್ಗಣದೊಡಿ (22), ಇಸರಾರ ಅಲಿಯಾಸ್ ಅಬ್ದುಲ್ ಶೇಖ್ (23), ಸೋಹಿಲ್ ಖಾನ್ ಹಾಲಬಾವಿ (23), ಆನಂದ ಕೊಪ್ಪದ (25), ಕಾರ್ತಿಕ ಮಾನೆ (24), ಕಿರಣ ಕಲಬುರಗಿ (30, ವಿಜಯ ಕಠಾರೆ (24) ಗಡಿಪಾರು ಆದೇಶಕ್ಕೆ ಒಳಗಾದ ರೌಢಿಶೀಟರ್ ಗಳಾಗಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿ ಮಹನಿಂಗ ನಂದಗಾವಿ, ಆರ್.ರವೀಶ್, ಎಸಿಪಿ, ವಿವಿಧ ಠಾಣೆಗಳ ಇನ್ಸ್ಪೆಕ್ಟರ್ ಗಳು ಇದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button