ಹುಬ್ಬಳ್ಳಿ: ಸಂಭ್ರಮದ ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಸಂಭ್ರಮದ ಗಣೇಶೋತ್ಸವವನ್ನು ಭಕ್ತಿ ಮತ್ತು ಸಡಗರದಿಂದ ಆಚರಿಸಲಾಯಿತು.
ಅಲ್ಲದೇ ಹಬ್ಬವನ್ನು ಪರಿಸರ ಸ್ನೇಹಿ ಹಬ್ಬವಾಗಿ ಆಚರಿಸುವ ಮೂಲಕ ಎಲ್ಲಾ ಭಕ್ತರು ಗಣೇಶನ ಮೂರ್ತಿಯನ್ನು ಮಣ್ಣಿನಿಂದ ಮಾಡಿದ ಅಲಂಕಾರಿಕ ಮೂರ್ತಿಯೊಂದಿಗೆ ಆಚರಿಸಿದರು.

ಭಕ್ತರು ಮನೆಯಲ್ಲಿ ವಿವಿಧ ಅಲಂಕಾರಗಳಿಂದ ಅಲಂಕರಿಸಿ ಮಹಾಗಣಪತಿಯನ್ನು ಪೂಜಿಸುವ ಮೂಲಕ ಕುಟುಂಬದ ಸದಸ್ಯರು ಮಹಾ ಗಣಪತಿಯ ಆರಾಧನೆ ಮಾಡುವ ಮೂಲಕ ಕಷ್ಟಗಳನ್ನು ಪರಿಹರಿಸುವ ಮಹಾದೈವ ಎಂದು ಪ್ರಾರ್ಥನೆ ಮಾಡಿದ್ದಾರೆ.

ಗಣೇಶ ಚತುರ್ಥಿ ಹಬ್ಬ ಇಡೀ ಜಗತ್ತಿನಾದ್ಯಂತ ಸಂಭ್ರಮ ಸಡಗರದಿಂದ ಆಚರಿಸುವ ಮೂಲಕ ಮಹಾಗಣಪತಿ ಆರಾಧನೆಗೆ ಹೆಚ್ಚಿನ ಶುಭವನ್ನು ತರುವ ಹಬ್ಬವಾಗಿದೆ. ಮನೆಯಲ್ಲಿ ಎಲ್ಲರೂ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನ ಪ್ರತಿಷ್ಠಾಪನೆ ಮಾಡಿ ಪರಿಸರದ ಮೇಲಿನ ಕಾಳಜಿಯನ್ನ ಎಲ್ಲರೂ ತಿಳಿದುಕೊಳ್ಳಲು ಅತ್ಯವಶ್ಯವಾಗಿ ಇರುವುದರಿಂದ ಎಲ್ಲ ಭಕ್ತರು ಪರಿಸರ ಸ್ನೇಹಿತರನ್ನು ಮನೆಯಲ್ಲಿ ಸ್ಥಾಪನೆ ಮಾಡಿ ಭಕ್ತಿ ಭಾವದಿಂದ ಪೂಜಿಸುತ್ತಿರುವುದು ವಿಚಾರವಾಗಿದೆ.

ವಿವಿಧ ಭಾಗಗಳಲ್ಲಿ ವಿವಿಧ ಅಲಂಕಾರಕ ಮಹಾ ಗಣಪತಿಗಳನ್ನು ಪ್ರತಿಷ್ಠಾಪನೆ ಮಾಡಿ ಪೂಜ್ಯ ಭಾವದಿಂದ ಮನೆಯಲ್ಲಿ ಅಲಂಕೃತಗೊಂಡ ಗಣಪತಿಗಳನ್ನು ನೋಡಬಹುದಾಗಿದೆ.




