Uncategorizedಜಿಲ್ಲೆರಾಜಕೀಯ
ತೆರೆಮರೆಯ ಗುದ್ದಾಟಕ್ಕೆ ಕಾರಣವಾಗಿದ್ದ ಕಿಮ್ಸ್ ಸಿಓಎ ಸ್ಥಾನಕ್ಕೆ ಹೊನಕೇರಿ ನೇಮಕ…!
ಹುಬ್ಬಳ್ಳಿ : ನಗರದ ಕರ್ನಾಟಕ ವೈದ್ಯಕೀಯ ಮತ್ತು ವಿಜ್ಞಾನ ಸಂಸ್ಥೆ(ಕಿಮ್ಸ್)ಗೆ ಮುಖ್ಯ ಆಡಳಿತ ಅಧಿಕಾರಿ(ಸಿಒಎ)ಯನ್ನಾಗಿ ವಿಜಯಕುಮಾರ ಹೊನಕೇರಿ ಅವರಿಗೆ ಸರ್ಕಾರ ಆದೇಶ ಹೊರಡಿಸಿದೆ.
ಹೌದು, ಕಳೆದ ತಿಂಗಳು ಇದೇ ಹುದ್ದೆಗೆ ಭೂ ಸ್ವಾಧೀನ ವಿಶೇಷ ಅಧಿಕಾರಿಯಾಗಿದ್ದ ಇಸ್ಮಾಯಿಲ್ ಶಿರಹಟ್ಟಿ ಅವರನ್ನು ನೇಮಿಸಲಾಗಿದೆ. ಆದರೆ, ಅವರಿಗೆ ಐದು ದಿನಗಳವರೆಗೂ ಅಧಿಕಾರ ವಹಿಸಿಕೊಳ್ಳಲು ಅವಕಾಶ ಕೊಡಲಿಲ್ಲ. ಈ ಹುದ್ದೆಯಲ್ಲಿದ್ದು ವರ್ಗಾವಣೆಗೊಂಡಿದ್ದ ರಾಜಶ್ರೀ ಜೈನಾಪುರ ಅವರು ಪ್ರಭಾರಿಯಲ್ಲಿದ್ದ ಸುಮಾ ಗುಮಾಸ್ತೇ ಅವರಿಗೆ ಚಾರ್ಜ್ ಕೊಟ್ಟು ಹೋಗಿದ್ದರು. ಇದೀಗ ಅದೇ ಹುದ್ದೆಗೆ ಹಿರಿಯ ಕೆಇಎಸ್ ಅಧಿಕಾರಿ ವಿಜಯಕುಮಾರ ಹೊನಕೇರಿ ಅವರಿಗೆ ಸರ್ಕಾರ ನೇಮಕ ಮಾಡಿದೆ.
ಇನ್ನು, ವಿಜಯಕುಮಾರ ಇಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಹೊನಕೇರಿ ಅವರು ಈ ಮೊದಲು ನೀರಾವರಿ ನಿಗಮದ ಆಡಳಿತಾಧಿಕಾರಿಯಾಗಿದ್ದರು. ಬೈಲಹೊಂಗಲ ಉಪವಿಭಾಗದ ಎಸ್ಸಿಯಾಗಿ ಕೆಲಸ ಮಾಡಿದ್ದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1