
ಹುಬ್ಬಳ್ಳಿ/ನವಲಗುಂದ: ನಿರುದ್ಯೋಗ ಸಮಸ್ಯೆಯನ್ನ ಹೋಗಲಾಡಿಸುವ ಉದ್ದೇಶದಿಂದ ಎಸ್.ಪಿ.ಫೌಂಡೇಷನ್ ನವಲಗುಂದ ಪಟ್ಟಣದಲ್ಲಿ ಮುಂಬರುವ ಫೆ.8 ಶನಿವಾರದಂದು ಉದ್ಯೋಗಮೇಳವನ್ನು ಹಮ್ಮಿಕೊಂಡಿದೆ.
ಈ ಬಗ್ಗೆ ನವಲಗುಂದದಲ್ಲಿ ಫೌಂಡೇಷನ್ ಪ್ರಮುಖರಾದ ಸದಾನಂದ ಗಾಳಪ್ಪನವರ ಮಾಹಿತಿ ನೀಡಿದ್ದು, ಎಸ್.ಪಿ.ಫೌಂಡೇಷನ್ ಮೂಲಕ ನಿರುದ್ಯೋಗಿಗಳಿಗೆ ಸುಮಾರು 2500 ನೌಕರಿಗಳನ್ನ 50 ಕಂಪನಿಗಳ ಮೂಲಕ ಕೊಡಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.
ಎಸ್.ಪಿ.ಫೌಂಡೇಷನ್ ನಡೆಸುತ್ತಿರುವ ಉದ್ಯೋಗ ಮೇಳವೂ ನವಲಗುಂದ ಪಟ್ಟಣದ ಮಾಡೆಲ್ ಹೈಸ್ಕೂಲ್‌ನಲ್ಲಿ ನಡೆಯಲಿದೆ. SSLC, ಪಿಯುಸಿ, ಯಾವುದೇ ಡಿಗ್ರಿ, ಐಟಿಐ, ಡಿಪ್ಲೋಮಾ, ಬಿಇ, ಎಮ್.ಟೆಕ್, ಬಿಎಡ್, ಡಿಎಡ್, ಪಿಜಿ, ಎಮ್ಎಸ್ಸಿ, ಎಮ್ ಎ, ಎಂಕಾಂ, ಎಂಬಿಎ, ಎಮ್ ಎಸ್ ಡಬ್ಲೂ ಪೂರೈಸಿದ ಹಾಗೂ ವಿಕಲಚೇತನರಿಗೂ ಅವಕಾಶವಿದ್ದು, ಅವರು ಮೇಳದಲ್ಲಿ ಭಾಗವಹಿಸಬಹುದೆಂದು ಗಾಳಪ್ಪನವರ ತಿಳಿಸಿದ್ದಾರೆ.
ಬೇಕಿರುವ ದಾಖಲೆಗಳು: ಉದ್ಯೋಗ ಮೇಳದಲ್ಲಿ ಭಾಗವಹಿಸುವ ಉದ್ಯೋಗ ಆಕಾಂಕ್ಷಿಗಳು ಹಾಜರಾಗುವಾಗ ತಮ್ಮ ಶೈಕ್ಷಣಿಕ ದಾಖಲೆಗಳ ಝರಾಕ್ಸ್ ಪ್ರತಿ, ಪಾಸ್ ಪೋರ್ಟ್ ಸೈಜ್ ಫೋಟೋ, ಆಧಾರ ಕಾರ್ಡ್ ಹಾಗೂ ಸ್ವ-ವಿವರದ (resume) ಅರ್ಜಿಯೊಂದಿಗೆ ಪಾಲ್ಗೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 8197596955, 7019881813, 8618339066, 8453208555 ಗೆ ಸಂಪರ್ಕಿಸಿ.
ಇಲ್ಲವೇ ಸ್ಕ್ಯಾನ್ ಮಾಡಿ ಮಾಹಿತಿ ಪಡೆದುಕೊಳ್ಳಿ….