ಹುಬ್ಬಳ್ಳಿ: ಇಲ್ಲಿನ ಉಣಕಲ್ ಸಾಯಿನಗರದ ಈಶ್ವರ ದೇವಸ್ಥಾನದಲ್ಲಿ ಭಾನುವಾರ ತಡರಾತ್ರಿ 1 ಗಂಟೆ ಸುಮಾರಿಗೆ ನಡೆದ ಗ್ಯಾಸ್ ಸಿಲಿಂಡರ್ ಸ್ಪೋಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡವರ ಮಾಹಿತಿ ನಿಮ್ಮ ದಿನವಾಣಿಗೆ ಲಭ್ಯವಾಗಿದೆ.
ಮಾಲಾಧಾರಿಗಳೆಲ್ಲ ಅಚ್ಚವ್ವನ ಕಾಲೋನಿಯ ಸನ್ನಿದಾನದ ಧರ್ಮಶಾಸ್ತ್ರನ ಭಕ್ತರಾಗಿದ್ದು, ಇದರಲ್ಲಿ ತಂದೆ-ಮಗ ಕೂಡಾ ಇದ್ದರು ಎಂದು ತಿಳಿದುಬಂದಿದೆ.
9 ಜನ ಮಾಲಾಧಾರಿಗಳ ಪೈಕಿ ಪ್ರಕಾಶ ಬಾರಕೇರ್, ವಿನಾಯಕ ಬಾರಕೇರ್, ತೇಜಸ್ ರೆಡ್ಡಿ, ಸಂಜಯ ಸವದತ್ತಿ, ಲಿಂಗರಾಜ ಬೀರನೂರ, ರಾಜು ಹರ್ಲಾಪುರ, ನಿಂಗಪ್ಪ, ಮಂಜು ವಾಘಮೋಡೆ, ಶಂಕರ ಚೌಹಾನ್ ಗಾಯಗೊಂಡರೆಂದು ಗುರುತಿಸಲಾಗಿದೆ.
ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಕಿಮ್ಸ್ ಆವರಣದ ಮುಂಭಾಗದಲ್ಲಿ ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
1
+1