ಪ್ರತಿಷ್ಠಿತ ಫೈನಾನ್ಸ್ ಕಂಪನಿಯಲ್ಲಿ ಲಕ್ಷ ಲಕ್ಷ ರೂ ವಂಚನೆ..!!!
ಹುಬ್ಬಳ್ಳಿ: ಎಲ್ ಆ್ಯಂಡ್ ಟಿ ಕಂಪನಿ ಸಿಬ್ಬಂದಿಯೊರ್ವನಿಂದ ಬರೋಬರಿ 21 ಜನರಿಗೆ ದೋಖಾ ಆಗಿದ್ದು, ಸಾಲದ ಕಂತಿನ ಹಣವನ್ನು ಸರಿಯಾದ ಸಮಯಕ್ಕೆ ವಾಪತಿಸಿದರೂ ಸಹ ಅದನ್ನು ಸಿಬ್ಬಂದಿಯೊರ್ವ ತನ್ನ ಸ್ವಂತಕ್ಕೆ ಬಳಸಿಕೊಂಡು ಮೋಸ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌದು, ಇಲ್ಲಿನ ದೇಶಪಾಂಡೆ ನಗರದ ಕಲಬುರ್ಗಿ ಸ್ವ್ಕೇರ್’ನ ಮೂರನೇ ಮಹಡಿಯಲ್ಲಿನ ಎಲ್ ಆ್ಯಂಡ್ ಟಿ ಫೈನಾನ್ಸ್ ಸರ್ವಿಸ್ ಕಂಪನಿಯಲ್ಲಿ ಜಿಲ್ಲೆಯ ವಿವಿಧ ಪ್ರದೇಶದ ಗ್ರಾಹಕರು ತಮ್ಮ ಟ್ರ್ಯಾಕ್ಟರ್ ಖರೀದಿಗೆ ಸಾಲ ಪಡೆದುಕೊಂಡಿದ್ದರು.
ಅದರಂತೆ ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಸಾಲದ ಕಂತನ್ನು ಗ್ರಾಹಕರು ನೀಡುತ್ತಾ ಹೋಗಿದ್ದಾರೆ. ಆದರೆ ಫೈನಾನ್ಸ್ ಪ್ರಂಟ್ ಲೈನ್ ಕಲೆಕ್ಷನ್ ಆಫೀಸರ ಆಗಿದ್ದ ಈಶ್ವರಪ್ಪ ಶಾನವಾಡ ಬರೋಬರಿ 21 ಗ್ರಾಹಕರಿಂದ ಒಟ್ಟು 14,52,175 ರೂಪಾಯಿ ಕಂತಿನ ಪಾವತಿ ಹಣವನ್ನು ಪಡೆದು, ಹಣಕ್ಕೆ ರಶೀದಿ ನೀಡದೇ ತಲೆಮರಿಸಿಕೊಂಡಿದ್ದಾನೆ.
ಇದೀಗ ಸಾಲದ ಕಂತು ಸರಿಯಾದ ಸಮಯಕ್ಕೆ ನೀಡಿದ ಗ್ರಾಹಕರು ಮುಂದಿನ ದಾರಿ ಕಾಣದೇ ನ್ಯಾಯಕ್ಕಾಗಿ ಒತ್ತಾಯಿಸಿದ್ದಾರೆ.
ಇತ್ತ ಎಲ್ ಆ್ಯಂಡ್ ಟಿ ಫೈನಾನ್ಸ್ ಸರ್ವಿಸ್ ಕಂಪನಿಯ ವರ್ಕಿಂಗ್ ಮ್ಯಾನೇಜರ್ ಮಹೇಶ ಸವಣೂರ ಉಪನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ತಲೆ ಮರಿಸಿಕೊಂಡಿರುವ ಈಶ್ವರಪ್ಪ’ನನ್ನು ಹಿಡಿದು ಗ್ರಾಹಕರ ಹಣವನ್ನು ವಾಪಾಸ್ ಮಾಡಿಸುವಂತೆ ದೂರಿನಲ್ಲಿ ತಿಳಿಸಿದ್ದಾರೆ.