
ಹುಬ್ಬಳ್ಳಿ: ನಗರದ ಬೆಲ್ಲದ ಆ್ಯಂಡ್ ಕಂಪನಿಯಲ್ಲಿ ಕೆಲಸಮಾಡಿಕೊಂಡಿದ್ದ ಇಬ್ಬರು ನೌಕರರು 11 ಗ್ರಾಹಕರು ಕಾರು ಖರೀದಿಸಲು ಕೊಟ್ಟಿದ್ದ ಬುಕ್ಕಿಂಗ್ ಹಣವನ್ನು ಕಂಪನಿಗೆ ಪೂರ್ಣ ತುಂಬದೆ ಒಂದಿಷ್ಟು ಇಟ್ಟುಕೊಂಡು ಮೋಸವೆಸಗಿದ ಬಗ್ಗೆ ಗೋಕುಲ ರಸ್ತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೌದು, ಕಂಪನಿಯಲ್ಲಿ ಟೀಮ್ ಲೀಡರ್ ಆಗಿರುವ ಸುಧೀರ ಮತ್ತು ಸೇಲ್ಸ್ ಕನ್ಸಲ್ಟಂಟ್ ಆದ ಸಿದ್ಧಾಂತ ಎಂಬುವರೆ ಮೋಸ ಮಾಡಿದ್ದಾಗಿ ರಾಮಚಂದ್ರ ಎಂಬುವರು ದೂರು ಕೊಟ್ಟಿದ್ದಾರೆ.
2024ರ ಏಪ್ರಿಲ್‌ನಿಂದ 2025ರ ಮಾರ್ಚ್ 1ರ ವರೆಗೆ ಇವರಿಬ್ಬರು 11 ಗ್ರಾಹಕರು ಕಂಪನಿಯ ಕಾರುಗಳನ್ನು ಖರೀದಿಸಲು ಕೊಟ್ಟ ಬುಕ್ಕಿಂಗ್ ಹಣದಲ್ಲಿ ಗೋಕುಲ ರಸ್ತೆಯ ಬೆಲ್ಲದ ಆ್ಯಂಡ್ ಕಂಪನಿಯ ಪ್ರಧಾನ ಕಚೇರಿಯಲ್ಲಿ ಪೂರ್ಣ ತುಂಬದೆ 98,100 ರೂ. ತಮ್ಮ ಸ್ವಂತ ಲಾಭಕ್ಕಾಗಿ ಅಕ್ರಮವಾಗಿ ಪಡೆದುಕೊಂಡು ಗ್ರಾಹಕರು ಮತ್ತು ಕಂಪನಿಗೆ ನಂಬಿಕೆ ದ್ರೋಹ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1