ಹುಬ್ಬಳ್ಳಿ: ಇಲ್ಲಿನ ಉಪಕಾರಾಗೃಹದಲ್ಲಿ ಕ್ಷುಲ್ಲಕ ವಿಚಾರಕ್ಕೆ ವಿಚಾರಣಾಧೀನ ಕೈದಿಗಳ ಗುಂಪು, ಬಂಧಿತ ಸಹೋದರರು ಹಾಗೂ ಕಾರಾಗೃಹ ಸಿಬ್ಬಂದಿ ಮೇಲೆ ಹಲ್ಲೇ ಮಾಡಿರುವ ಘಟನೆ ನಡೆದಿದೆ.
ಶುಕ್ರವಾರ ವಿಚಾರಣಾಧೀನ ಗೈದಿಗಳನ್ನು ಭೇಟಿಯಾಗಲೆಂದು ಕೈದಿಗಳ ಕುಟುಂಬದ ಸದಸ್ಯರು ಸಂದರ್ಶನ ಕೊಠಡಿಯಲ್ಲಿ ತಮ್ಮವರೊಂದಿಗೆ ಪ್ರತ್ಯೇಕವಾಗಿ ಮಾತನಾಡುತ್ತಿದ್ದರು. ಈ ವೇಳೆ ಬಂಧಿತ ವಿನಾಯಕ ಭಂಡಾರಿ ಹಾಗೂ ಅಭಿಷೇಕ ಭಂಡಾರಿ ಎಂಬಾತರ ಸಹೋದರಿಯ ಕಾಲನ್ನು ಸಂದರ್ಶಕರೊಬ್ಬರು ತುಳಿದಿದ್ದಾರೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಪರಸ್ಪರ ವಾಗ್ವಾದ ನಡೆದಿದೆ. ಅಷ್ಟೇ ಅಲ್ಲದೇ ಬಾಬು ಬಳ್ಳಾರಿ, ಪ್ರಜ್ವಲ್ ನೆಟ್ಟೂರು, ದತ್ತಾತ್ರೇಯ ಮತ್ತಿಕಟ್ಟಿ ಎಂಬಾತರು ಬಂಧಿತ ಬಂಢಾರಿ ಸಹೋದರರ ಮೇಲೆ ಏಕಾಏಕಿ ಅಟ್ಯಾಕ್ ಮಾಡಿ ಹಲ್ಲೇ ಮಾಡಿದ್ದಾರೆ.
ಈ ವೇಳೆ ಅಲ್ಲಿಯೇ ಕರ್ತವ್ಯದಲ್ಲಿದ್ದ ಜೈಲರ್, ಹಾಗೂ ಸಿಬ್ಬಂದಿಗಳು ತಂಟೆ ಬಿಡಿಸಿ ಒಳಗಡೆ ಕರೆದೊಯ್ದಿದ್ದಾರೆ. ಆಗ ಪ್ರಜ್ವಲ್ ಅಲ್ಲಿಯ ಬಿದ್ದದ್ದ ಕಲ್ಲಿನಿಂದ ಎಸೆದಾಗ ಭಂಡಾರಿ ಸಹೋದರರಿಗ ಗಾಯಗಳಾಗಿವೆ. ಬಳಿಕ ಇವರನ್ನು ಕ್ವಾರಂಟೈನ್ ವಿಭಾಗಕ್ಕೆ ಕಳಿಸಲಾಗಿದೆ.
ಅಲ್ಲಿಯೂ ಬಾಬು, ಪ್ರಜ್ವಲ್, ದತ್ತಾತ್ರೇಯ, ಡೇವಿಡ್, ಕುಮಾರ ಯಾಮರ್ತಿ ಸೇರಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳ ಕೆಲಸಕ್ಕೆ ಅಡ್ಡಿ ಪಡಿಸಿ, ಮಹಿಳಾ ಮತ್ತು ಪುರುಷ ಸಿಬ್ಬಂದಿಯನ್ನು ಎಳೆದಾಡು ಹಲ್ಲೇ ಮಾಡಿದ್ದಾರೆ. ಬಳಿಕ ಜೀವ ಬೆದರಿಕೆ ಹಾಕಿದ್ದಾರೆ. ಇವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಪಕಾರಾಗೃಹದ ಅಧೀಕ್ಷಕಿ ನಾಗರತ್ನಂ ಅಶೋಕ ನಗರ ಪೋಲಿಸ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.