ಹುಬ್ಬಳ್ಳಿಯ ಹೊರವಲಯದಲ್ಲಿ ಮಾರಣಾಂತಿಕ ಹಲ್ಲೇ : ಯುವಕನ ಸ್ಥಿತಿ ಗಂಭೀರ
ಹುಬ್ಬಳ್ಳಿ: ಯುವಕನೊಬ್ಬನ ಮೇಲೆ ಕ್ಷುಲ್ಲಕ ಕಾರಣಕ್ಕೆ ಎಂಟು ಜನರ ಗುಂಪೊಂದು ಮಾರಣಾಂತಿಕ ಹಲ್ಲೇ ನಡೆಸಿದ ಘಟನೆ ತಾಲೂಕಿನ ಬೆಳಗಲಿ ಗ್ರಾಮದಲ್ಲಿ ನಡೆದಿದೆ.
ಮಹಮ್ಮದ್ ಅಲಿ ನದಾಫ್ (27) ಹಲ್ಲೇಗೆ ಒಳಗಾದ ಯುವಕನಾಗಿದ್ದು, ಈತನ ಮೇಲೆ ನೆರೆಹೊರೆಯ ಜನರ ಗುಂಪೊಂದು ಹಲ್ಲೇ ಮಾಡಿದೆ. ಬೆಳಗಲಿ ಗ್ರಾಮದಲ್ಲಿಂದು ಷರೀಫ್ ಹಾಗೂ ಗುರುಗೋವಿಂದಭಟ್ ರ ಜಾತ್ರಾ ಮಹೋತ್ಸವವಿತ್ತು. ಈ ಹಿನ್ನೆಲೆಯಲ್ಲಿ ಮಹಮ್ಮದ್ ಅಲಿ ತನ್ನೂರಿನ ಬಸ್ ನಿಲ್ದಾಣದ ಬಳಿ ಬಂದಿದ್ದಾನಂತೆ. ಈ ವೇಳೆ ಅದೇ ಊರಿನ ಹನುಮಂತ ಬೆಟದೂರ ಎಂಬಾತ ಸೈಕೋ ಮಹಮ್ಮದ್ ಅಲಿ ಎಂದು ಕರೆದಿದ್ದಾನಂತೆ. ಆಗ ಮಹಮ್ಮದ್ ಅಲಿ ಹಾಗೇ ಕರೆಯಬೇಡಾ ಎಂದು ಹೇಳಿದರು ಸಹಿತ ಹನುಮಂತ ಬೆಟದೂರ ಬಾಯಿಗೆ ಬಂದಹಾಗೇ ಬೈದಿದಲ್ಲದೇ ಹೊಡೆಯಲು ಮುಂದಾಗಿದ್ದಾನಂತೆ. ಆಗ ಮಹಮ್ಮದ್ ಹನುಮಂತನನ್ನು ದೂರ ತಳ್ಳಿದ್ದಾನೆ. ಇದರಿಂದ ಮತ್ತಷ್ಟು ಕೋಪಕೊಂಡು ಹನುಮಂತ ಪರಶುರಾಮ ನೆರ್ತಿ, ಷರೀಫ್ ನೆಲಗೇರಿ, ಬಸವರಾಜ ನೆರ್ತಿ, ಗುರುಶಾಂತಗೌಡ ಪಾಟೀಲ್ ಸೇರಿದಂತೆ ಇನ್ನಿತರರನ್ನು ಕರೆಸಿ ಷರೀಫ್ ನ ಮೇಲೆ ಮನಬಂದಂತೆ ತಳ್ಳಿಸಿ ಹಲ್ಲೆ ಮಾಡಿದ್ದಾರೆಂದು ಮಹಮ್ಮದ್ ಅಲಿ ಕುಟುಂಬಸ್ಥರು ತಿಳಿಸಿದ್ದಾರೆ. ಇನ್ನು ಮಹಮ್ಮದ್ ಅಲಿ ನದಾಫ್ ನಿಗೆ ತಲೆ, ತುಟಿ, ಕೈ,ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಈತನಿಗೆ ಕುಟುಂಬಸ್ಥರು ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಈ ಘಟನೆ ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.