Top Newsಜಿಲ್ಲೆರಾಜಕೀಯರಾಜ್ಯ
Trending

ಪ್ರಮೋದ್ ಮುತಾಲಿಕ್ ಗಡಿಪಾರಿಗೆ ಫಾರೂಕ್ ಅಬುನವರ ಒತ್ತಾಯ…

ಹುಬ್ಬಳ್ಳಿ: ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪನೆ ಮಾಡಿದ್ದ ಗಣೇಶ ಮೂರ್ತಿಯ ವಿಸರ್ಜನೆಯಲ್ಲಿ ಭಾಗವಹಿಸಿ ಕೋವು ಸೌಹಾರ್ದತೆ ವಿಚಾರವಾಗಿ ಭಾಷಣ ಮಾಡಿದ್ದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಿರುದ್ಧ ಪೋಲಿಸ್ ಇಲಾಖೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯ ಪ್ರದಾನ ಕಾರ್ಯದರ್ಶಿ ಫಾರುಕ್ ಅಬುನವರ ಒತ್ತಾಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಗಣೇಶ ವಿಸರ್ಜನೆ ಅತ್ಯಂತ ಶಾಂತಿಯುತವಾಗಿದೆ. ಇದಕ್ಕೆ ಪೋಲಿಸ್ ಇಲಾಖೆ ಹಗಲಿರುಳು ಶ್ರಮಿಸಿದೆ. ಅವರಿಗೆ ಅಭಿನಂದನೆಗಳು. ಯಾವುದೇ ಹಬ್ಬ ಇರಲಿ, ಆಚರಣೆ ಇರಲಿ ಮನೆಯವರನ್ನು ಕರೆಯದೇ ಹೊರಗಿನವರನ್ನು ಕರೆದು ಹಬ್ಬ ಮಾಡುವುದು ಎಷ್ಟು ಸೂಕ್ತವಲ್ಲವೋ ಅಷ್ಟೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಕರೆದು ಒಂದು ಜಾತಿಯನ್ನು ಕೀಳಾಗಿ ನೋಡಿ ಮಾತನಾಡಿದ್ದು ಸರಿಯಲ್ಲ. ಈ ಮೂಲಕ ಬಸನಗೌಡ ಪಾಟೀಲ್ ಯತ್ನಾಳ ಸಮಾಜಕ್ಕೆ ಏನೂ ಸಂದೇಶವನ್ನು ಕಳಿಸಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಿರಿಯ ರಾಜಕಾರಣಿ. ಅವರು ಜನರ ಸಮಸ್ಯೆ ಏನಿದೆ ಅದನ್ನು ಕೇಳಿ ನಿವಾರಿಸಲು ಪ್ರಯತ್ನ ಮಾಡಬೇಕು‌. ಅದು ಬಿಟ್ಟು ಕೋಮುಭಾವನೆ ಕೆರಳಿಸುವುದು ಸರಿಯಲ್ಲ‌. ದೇಶ ಅಭಿವೃದ್ಧಿ ಆಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ದ್ವೇಷದ ರಾಜಕಾರಣ ಬಿಡಬೇಕು ಎಂದು ಒತ್ತಾಯಿಸಿದರು.

ಅದರಂತೆ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕೂಡಾ ಬಾಯಿ ಚಟಕ್ಕೆ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರು ಈಗಾಗಲೇ ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ್ತಿದ್ದಾರೆ. ಇದೀಗ ವರ್ಚಸ್ಸು ಬೆಳೆಸಿಕೊಳ್ಳಲು ಜಾತಿ ಧರ್ಮದ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಬಿಜೆಪಿಯಿಂದ ಲೋಕಸಭೆಯ ಟಿಕೆಟ್ ಪಡೆಯುವ ಆಸೆ ಹೊಂದಿದ್ದಾರೆ. ಅದಕ್ಕಾಗಿ ಈ ರೀತಿಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

ಇಂತಹ ಇಬ್ಬರ ವಿರುದ್ಧ ಪೋಲಿಸ್ ಇಲಾಖೆ ಸೊಮೋಟೋ ಪ್ರಕರಣ ದಾಖಲಿಸಿಕೊಂಡು ಧಾರವಾಡ ಜಿಲ್ಲೆಯ ಒಳಗಡೆ ಪ್ರವೇಶಕ್ಕೆ ನಿರ್ಬಂಧ ಹಾಕಬೇಕು. ಈ ಮೂಲಕ ದುಷ್ಟಬುದ್ದಿಗಳಿಗೆ ಪಾಠ ಕಲಿಸಬೇಕೆಂದು ಒತ್ತಾಯಿಸಿದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button