ರೈತರೇ ಎಚ್ಚರ ಎಚ್ಚರ.. ಹೊಲಗಳಿಗೆ ಹೋಗುವ ಮುನ್ನ…

ಹುಬ್ಬಳ್ಳಿ: ಹೊಲಕ್ಕೆ ಹೋಗುವ ರೈತರು ಹಾಗೂ ರೈತ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ದರೋಡೆ ಮಾಡುವ ಖತರ್ನಾಕ ಗ್ಯಾಂಗ್’ವೊಂದು ಹುಬ್ಬಳ್ಳಿಯಲ್ಲಿ ಆ್ಯಕ್ಟಿವ್ ಆಗಿದೆ.
ಹುಬ್ಬಳ್ಳಿಯ ಗ್ರಾಮೀಣ ಪ್ರದೇಶದಲ್ಲಿ ಅದರಲ್ಲೂ ಕೊಟಗೊಂಡಹುಣಸಿ, ಅದರಗುಂಚಿ, ಬಿಡನಾಳ, ಹಳ್ಯಾಳ, ಕಡಪಟ್ಟಿ, ರಿಂಗ್ ರೋಡ್ ಸುತ್ತಮುತ್ತಲಿನ ಭಾಗದಲ್ಲಿ ಹೊಲಗಳಿಗೆ ಕೆಲಸಕ್ಕೆ ಹೋಗುವ ಒಂಟಿ ರೈತರನ್ನು ಅಡ್ಡಗಟ್ಟುವ ಈ ಗ್ಯಾಂಗ್ ಹೆದರಿಸಿ, ಬೆದರಿಸಿ ಹಣ, ಮೊಬೈಲ್ ಸೇರಿದಂತೆ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದೆ.
ಇನ್ನು ಹೊಲದಲ್ಲಿ ಕರ್ತವ್ಯದಲ್ಲಿರುವ ರೈತ ಮಹಿಳೆಯರನ್ನು ಸಹ ಈ ಗ್ಯಾಂಗ್ ಅಡ್ಡಗಟ್ಟಿ ಅವರ ಕಿವಿಓಲೆ, ಮೂಗುತಿ, ಕೈಬಳೆ ಹೀಗೆ ನಗ, ನಾಣ್ಯವನ್ನು ದೋಚುತ್ತಿದೆ.
ಏನಾದರೂ ಕೃತ್ಯಕ್ಕೆ ಅಡ್ಡಿ ಮಾಡಿದ್ರೆ ಅವರನ್ನು ಹೊಡೆದುಬಡೆದು ಮಾಡಲು ಈ ಗ್ಯಾಂಗ್ ಹೆಸುವುದಿಲ್ಲ, ಹೀಗಾಗಿ ಅವರು ಕೇಳಿದನ್ನು ಕೊಟ್ಟು ಸುಮ್ಮನೆ ಇದ್ದುಬಿಟ್ಟರೇ ಒಳಿತು ಎನಿಸುತೆ ಎನ್ನುತ್ತಾರೆ ನೊಂದ ರೈತರು.
ಇಷ್ಟೆಲ್ಲಾ ಆದರೂ ಈವರೆಗೆ ಯಾವುದೇ ಪ್ರಕರಣ ದಾಖಲಾಗದೇ ಇರುವುದು ವಿಪರ್ಯಾಸದ ಸಂಗತಿ. ಈಗಲಾದರೂ ದಕ್ಷ ಪೊಲೀಸ್ ಅಧಿಕಾರಿ ಮುರಗೇಶ ಚನ್ನಣ್ಣವರ ಗ್ರಾಮೀಣ ಭಾಗದಲ್ಲಿ ಬೀಟ್ ವ್ಯವಸ್ಥೆ ಹೆಚ್ಚಿಸಿ, ರೈತರಿಗೆ ಕಂಟಕವಾಗಿರುವ ಗ್ಯಾಂಗ್’ನ ಹೆಡೆಮುರಿ ಕಟ್ಟಿ ದೇಶದ ಬೆನ್ನೆಲುಬು ರೈತರಿಗೆ ನೆರವಾಗುವ ಕೆಲಸ ಮಾಡತ್ತಾರಾ? ಎಂಬುದನ್ನು ಕಾದುನೋಡಬೇಕಿದೆ.
ಅಷ್ಟೇ ಅಲ್ಲದೇ ಇಂತಹ ದರೋಡೆ ಗ್ಯಾಂಗ್ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದಲ್ಲಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕ ಮನವಿಯಾಗಿದೆ.