ಹುಬ್ಬಳ್ಳಿ: ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ರಾಜಕಾಲುವೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಜಾನಮೌನ ವಹಿಸುತ್ತಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ.
ಹುಬ್ಬಳ್ಳಿ ತಾಲೂಕಿನ ಕುಸುಗಲ್ ಗ್ರಾಮದಲ್ಲಿ ಸರ್ವೇ ನಂಬರ್ 760/1/1ಬ/2 ರಲ್ಲಿ ಕವಿತಾ ಪ್ರವೀಣ ಅಂಗಡಿ ಎಂಬಾತರು ಸರಿಸುಮಾರು 1 ಎಕರೆ 20 ಗುಂಟೆ ಜಾಗವನ್ನು ವಾಣಿಜ್ಯಕ್ಕಾಗಿ ಭೂಮಿಯನ್ನು ಪರಿವರ್ತನೆ ಮಾಡಿಕೊಂಡಿದ್ದಾರೆ.
ಈ ವೇಳೆ ನೈಸರ್ಗಿಕವಾಗಿ ನೀರು ಹರಿದು ಹೋಗುವ ರಾಜಕಾಲುವೆಯನ್ನೇ ಒತ್ತುವರಿ ಮಾಡಿಕೊಂಡು ಕಾಂಪೌಂಡ್ ನಿರ್ಮಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ರಾಜಕಾಲುವೆ ತೆರವಿಗೆ ಪಿಡಿಓ ಸಾಹೇಬರಿಗೆ ಒತ್ತಾಯಿಸಿದರು ಯಾವುದೇ ಪ್ರಯೋಜನ ಆಗಿಲ್ಲ.
ಇನ್ನೂ ನಿಮ್ಮ ದಿನವಾಣಿ ಈ ವಿಷಯವನ್ನು ಸುದ್ದಿ ಪ್ರಸಾರ ಮಾಡುದ ನಂತರ ಪಿಡಿಓ ಸೆಕೆಂಡ್ ನೋಟಿಸ್ ಕೋಡತೇನಿ, ಕ್ರಮ ಕೈಗೊಳ್ಳತ್ತೇನೆ ಎಂದು ಹೇಳಿ ಸುಮ್ಮನೆ ಕುಳಿತ್ತಿದ್ದು ಅನುಮಾನ ಮೂಡಿಸುತ್ತಿದೆ.
ಪಿಡಿಓ ಸಾಬೇಬರು ಕಾಂಪೌಂಡ್ ಕಟ್ಟಿದ ಮಾಲೀಕರಿಗೆ ಭಯ ಪಡುತ್ತಿದ್ದಾರೆಯೇ? ಮತ್ತೆ ಬೇರೆ ಏನಾದರೂ ವ್ಯವಹಾರ ಆಗಿದೆ ನಾ ? ಅಧಿಕಾರಿಗಳೇ ತಪ್ಪಿತಸ್ಥರ ರಕ್ಷಣೆಗೆ ಇದ್ರೆ ಸಾರ್ವಜನಿಕರು ಪಾಡೇನು? ಒಂದು ಸಣ್ಣ ಅಂಗಡಿ ಇಟ್ರೇ ತೆರವು ಮಾಡಿ ಎಂದು ನೋಟಿಸ್ ನೀಡಿ ಒಂದೇ ವಾರಕ್ಕೆ ತೆರವು ಮಾಡುವ ಗ್ರಾಮ ಪಂಚಾಯತಿ ಅಧಿಕಾರಿಗಳು ಇಂತಹ ದೊಡ್ಡಮಟ್ಟದಲ್ಲಿ ಒತ್ತುವರಿ ಆಗಿದ್ರು ಸಹ ಯಾಕೆ ಇಷ್ಟು ವಿಳಂಬ ಧೋರಣೆ ಎಂದು ಸಾರ್ವಜನಿಕರು ಪ್ರಶ್ನೆ ಮಾಡುವಂತಾಗಿದೆ.
ಸದ್ಯ ಈ ವಿಷಯ ತಾಲೂಕು ಆಗು ಹೋಗುಗಳನ್ನು ನೋಡಿಕೊಳ್ಳುವ ತಹಶಿಲ್ದಾರ ಗಮನಕ್ಕೆ ಬಂದಿದೆ. ಖಡಕ್ ಅಧಿಕಾರಿ ತಹಶಿಲ್ದಾರ ಪ್ರಕಾಶ ಹೊಳೆಪ್ಪಗೋಳ ಅವರು ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳುತ್ತಾರೆ ಎಂಬ ಭ್ರಮೆಯಲ್ಲಿ ಸಾರ್ವಜನಿಕರು ಇದ್ದರೂ, ಅವರು ಸಹ ಬೇರೆ ಬೇರೆ ನೆಪ ಹೇಳಿ ಸುಮ್ಮನಾಗುತ್ತಿದ್ದಾರೆ ಏಕೆ?
ಈಗಲಾದರೂ ದಕ್ಷ ಅಧಿಕಾರಿ ತಹಶಿಲ್ದಾರ ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ, ತಪ್ಪಿತಸ್ಥರಿಗೆ ಶಿಕ್ಷೆ ಒದಗಿಸತ್ತಾರಾ? ಇಲ್ಲ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದ ನಂತರ ಕ್ರಮ ಕೈಗೊಳ್ಳತ್ತಾರಾ? ಎಂಬ ಮಾತುಗಳನ್ನು ಕುಸುಗಲ್ ಗ್ರಾಮಸ್ಥರ ಆಡುವಂತಾಗಿದೆ.