ಛಬ್ಬಿ ಬ್ಲಾಕ್ ಯುಥ್ ಕಾಂಗ್ರೇಸ್ ಅಧ್ಯಕ್ಷರಾಗಿ ದೇವೆಂದ್ರಗೌಡ ಧರ್ಮಗೌಡರ ಆಯ್ಕೆ…!
ಕುಂದಗೋಳ: ಕುಂದಗೋಳ ವಿಧಾನ ಸಭೆ ವ್ಯಾಪ್ತಿಯ ಛಬ್ಬಿ ಬ್ಲಾಕ್ ಯುಥ್ ಕಾಂಗ್ರೆಸ್ ಕಮಿಟಿಯ ನೂತನ ಅಧ್ಯಕ್ಷರಾಗಿ ದೇವೆಂದ್ರಗೌಡ ಧರ್ಮಗೌಡರ ಅವರನ್ನು ಆಯ್ಕೆ ಮಾಡಲಾಗಿದೆ.
ಛಬ್ಬಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷ ಸಂಘಟನೆಗಾಗಿ ಕೆಪಿಸಿಸಿ ರಾಜ್ಯ ಅಧ್ಯಕ್ಷ ಡಿ.ಕೆ.ಶಿವ ಕುಮಾರ್ ರವರ ಆದೇಶದ ಮೇರೆಗೆ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆದೇಶದ ಮೇರೆಗೆ ಧಾರವಾಡ ಗ್ರಾಮೀಣ ಯುಥ್ ಕಾಂಗ್ರೆಸ್ ಅಧ್ಯಕ್ಷರಾದ ವಿನೋದ್ ಅಸೂಟಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ದೇವೆಂದ್ರಗೌಡ ಪಕ್ಷದಲ್ಲಿ ಉತ್ತಮ ಕಾರ್ಯನಿರ್ವಹಿಸುತ್ತಿದ್ದು, ಯುವಕರಲ್ಲಿ ಮುಂಚೂಣಿ ನಾಯಕರೆಂದು ಛಬ್ಬಿ ಬ್ಲಾಕ್ ನಲ್ಲಿ ಗುರುತಿಸಿದ್ದಾರೆ. ಇವರ ನಡುವಳಿಕೆಯನ್ನು ಮೆಚ್ಚಿ ರಾಜ್ಯ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಇವರನ್ನು ತಾಲೂಕಿನ ಸ್ಥಳೀಯ ನಾಯಕರ ಸಹಯೋಗದಲ್ಲಿ ಪಕ್ಷ ಸಂಘಟನೆ ಮತ್ತು ಬಲವರ್ಧನೆಗೆ ಕಾರ್ಯೋನ್ಮುಖರಾಗಬೇಕೆಂದು ಸೂಚಿಸಲಾಗಿದೆ.
ಆಯ್ಕೆ ಮಾಡಿದ ಕಾಂಗ್ರೆಸ್ ಪಕ್ಷದ ನಾಯಕರಿಗೆ ನೂತನ ಛಬ್ಬಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವೆಂದ್ರಗೌಡ ಧರ್ಮಗೌಡ ಅಭಿನಂದನೆ ಸಲ್ಲಿಸಿದ್ದಾರೆ.