Top NewsUncategorizedಜಿಲ್ಲೆರಾಜಕೀಯಸಂಸ್ಕೃತಿ
Trending

ಪರಿಸರ ಸ್ನೇಹಿ ಗಣಪತಿ ಪ್ರತಿಷ್ಠಾಪನೆಗೆ ಹೊಸ ಅಭಿಯಾನ ಆರಂಭಿಸಿದ ರಜತ್…

ಹುಬ್ಬಳ್ಳಿ: ಈ ಬಾರಿಯ ಗಣೇಶ ಚತುರ್ಥಿಯಲ್ಲಿ ಸಾರ್ವಜನಿಕರು ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಯನ್ನು ಹೆಚ್ಚಾಗಿ ತಮ್ಮ ಮನೆಯಲ್ಲಿ ಹಾಗೂ ಸಾರ್ವಜನಿಕವಾಗಿ ಪ್ರತಿಷ್ಠಾಪನೆ ಮಾಡಬೇಕು ಎಂದು ಮನವಿ ಮಾಡಿದ್ದ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಇದೀಗ ಅಭಿಯಾನ ಶುರು ಮಾಡಿದ್ದಾರೆ

ಈ ದಿನ ಹುಬ್ಬಳ್ಳಿ ಧಾರವಾಡ ಪಶ್ಚಿಮ ಕ್ಷೇತ್ರದ ಗಾಮನಗಟ್ಟಿ, ಅಮರಗೋಳ ,ಸುತಗಟ್ಟಿ ,ಸತ್ತೂರು ಹಾಗೂ ಉಣಕಲ್ ಸೇರಿದಂತೆ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಹಿಂದಿನಿಂದಲೂ ಮಣ್ಣಿನ ಗಣಪತಿ ತಯಾರಿಸುತ್ತಾ ಬಂದಿರುವ ವ್ಯಕ್ತಿಗಳನ್ನು ಭೇಟಿ ಮಾಡಿ ಅವರಿಗೆ ಸನ್ಮಾನಿಸಿ ಪರಿಸರಕ್ಕೆ ಹಾನಿಯಾಗುವ ಪಿಓಪಿ ಗಣಪತಿ ಮೂರ್ತಿಯನ್ನು ತಯಾರು ಮಾಡುವುದನ್ನು ಸ್ವಯಂ‌ ಪ್ರೇರಿತವಾಗಿ ತಿರಸ್ಕರಿಸಿ, ಮಣ್ಣಿನ ಗಣಪತಿ ತಯಾರಿಕೆಗೆ ಹೆಚ್ಚಿನ ಆದ್ಯತೆ ನೀಡೋಣ ಎಂದು ಮನವಿ‌ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಹಾಗೂ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಾಕುಂತಲ ಸೇರಿದಂತೆ ಹಲವು ಕಾಂಗ್ರೆಸ್ ಕಾರ್ಯಕರ್ತರು ರಜತ್ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಅಧಿಕಾರಿಗಳಿಂದ ಅಭಿಯಾನಕ್ಕೆ ಬೆಂಬಲ

ಈ ಬಾರಿ ಗಣೇಶೋತ್ಸವಕ್ಕೆ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ಬಳಸಿ ಎಂಬ ನಮ್ಮ ಅಭಿಯಾನಕ್ಕೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮೊಹಮದ್‌ ರೋಷನ್‌ ಅವರು ಬೆಂಬಲ ಸೂಚಿಸಿದ್ದಾರೆ.

ಈ ಬಾರಿ ಗಣೇಶೋತ್ಸವಕ್ಕೆ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿ ಬಳಸಿ ಎಂಬ ನಮ್ಮ ಅಭಿಯಾನಕ್ಕೆ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಅವರು ಬೆಂಬಲ ಸೂಚಿಸಿದ್ದಾರೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button