
ಮುಂಡಗೋಡ: ತಾಲ್ಲೂಕಿನ ಕಾತೂರ ಪಾಳಾ ಭಾಗಗಳಲ್ಲಿ ಇತ್ತೀಚಿಗೆ ಪೋಲಿಸ್ ದಾಳಿ ನಡೆದಿದ್ದರೂ, ಕೆಲವೇ ದಿನಗಳಲ್ಲಿ ಮತ್ತೆ ಮಟ್ಕಾ ( ಓಸಿ) ಅಕ್ರಮ ಚಟುವಟಿಕೆ ಆರಂಭವಾಗಿದೆ.
ಪೋಲಿಸರ ದಾಳಿ ಸಮಯದಲ್ಲಿ ಮಟ್ಕಾ ಬರೆಯುವದು ತಾತ್ಕಾಲಿಕವಾಗಿ ನಿಂತಿತ್ತಾಗಿದ್ದರೂ, ಇದೀಗ ಮತ್ತೆ ರಾಜಾರೋಷವಾಗಿ ಮಟ್ಕಾ ಬರೆಯುವದು ಬಯಲಿಗೆ ಬಂದಿದೆ. ಮಟ್ಕಾ ನಡೆಸುವವರಿಗೆ ಯಾವುದೇ ಭಯವಿಲ್ಲದೆ ಮತ್ತೆ ವ್ಯವಹಾರ ಆರಂಭವಾಗಿರುವುದು, ದಾಳಿ ಕೇವಲ ತೋರಿಕೆಗಷ್ಟೇ ಸೀಮಿತವೇ..? ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಹುಟ್ಟಿದೆ.
ದಿನಗೂಲಿ ಮಾಡಿ 300 ರಿಂದ 500 ಕೂಲಿ ಪಡೆಯುವ ಕೂಲಿ ಕಾರ್ಮಿಕರು ದಿನದ ಕೂಲಿಯ ಅರ್ಧದಷ್ಟು ಮಟ್ಕಾ ದಂತಹ ಚಟುವಟಿಕೆಗಳಿಗೆ ಹಾಳು ಮಾಡಿ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕೇವಲ ಮಟ್ಕಾ ಬರೆಯವ ಅಂಗಡಿಕಾರರನ್ನು ಮಾತ್ರ ಬಂಧಿಸುವ ಪೋಲಿಸರು ಅದರ ಸೂತ್ರದಾರರನ್ನು ಏಕೆ ಬಂಧಿಸುತ್ತಿಲ್ಲ..? ಅವರಿಗೆ ಕಡಿವಾಣ ಹಾಕಿದಾಗಲೇ ಮಾತ್ರ ಇಂತಹ ಚಟುವಟಿಕೆಗಳಿಗೆ ಅಂತ್ಯ ಸಾಧ್ಯ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.
ಇನ್ನಾದರೂ ಈ ಬಗ್ಗೆ ಪೋಲಿಸ್ ಇಲಾಖೆಯ ಹಿರಿಯ ಅಧಿಕಾರಿಗಳು ಗಂಭೀರವಾಗಿ ಪರಿಶೀಲನೆ ನಡೆಸಿ, ನಿರಂತರ ನಿಗಾವಹಿಸಿ ಶಾಶ್ವತ ಪರಿಹಾರ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.
ವರದಿ: ವೆಂಕಟೇಶ ದಾಸರ




