ಹುಬ್ಬಳ್ಳಿ: ಇದು ದಿನವಾಣಿ “BIG IMPACT” ಹೌದು, ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ ಸತ್ತವರ ಹೆಸರಿನಲ್ಲಿ ಜಾಗ ನೋಂದಣಿ ಮಾಡಿದಲ್ಲದೇ, ಮಾರಾಟ ಮಾಡಲಾಗಿತ್ತು.
ಈ ಬಗ್ಗೆ ನಿಮ್ಮ ದಿನವಾಣಿ “ಸತ್ತವರ ಹೆಸರಿನಲ್ಲಿ ಜಾಗ ಖರೀದಿ, ಮಾರಾಟ, ಹುಡಾದಲ್ಲಿ ಬ್ರಹ್ಮಾಂಡ ಹಗರಣ” ಎಂಬ ಶೀರ್ಷಿಕೆ ಅಡಿಯಲ್ಲಿ ಸುದ್ದಿಯನ್ನು ಬಿತ್ತರ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು.
ಇದೀಗ ಸುದ್ದಿ ನೋಡಿ ಎಚ್ಚೆತ್ತುಕೊಂಡಿರುವ ಹುಡಾ ಅಧ್ಯಕ್ಷ ಶಾಕೀರ್ ಸನದಿ ಹಾಗೂ ಆಯುಕ್ತ ಸಂತೋಷಕುಮಾರ ಬಿರಾದಾರ ಖೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚನೆ ಮಾಡಿರುವ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ.
ಅಷ್ಟೇ ಅಲ್ಲದೇ ಈ ಬಗ್ಗೆ ಸಂಪೂರ್ಣ ತನಿಖೆ ನಡೆಸಿ ಅಧಿಕಾರಿಗಳಾಗಲಿ, ಬೇರೆ ಯಾರೇ ತಪ್ಪು ಮಾಡಿದ್ರು ಸಹ ಅಂತವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ.
ಇನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಮೋಸ ಮಾಡಿದ ಕುರಿತಾಗಿ ಸುದ್ದಿ ಪ್ರಕಟಿಸಿದ ನಿಮ್ಮ “ದಿನವಾಣಿ“ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.