ಹುಬ್ಬಳ್ಳಿ: ನಗರದ ಚನ್ನಮ್ಮ ವೃತ್ತದಲ್ಲಿ ಅಭಿಮಾನಿಗಳು ಧ್ರುವ ಸರ್ಜಾ ಹುಟ್ಟು ಹಬ್ಬ ಆಚರಣೆ ಮಾಡುವುದರ ಮೂಲಕ ಸಂಭ್ರಮಿಸಿದ್ದಾರೆ. ಇನ್ನೂ ನೆಚ್ಚಿನ ನಟನ ಹುಟ್ಟು ಹಬ್ಬವನ್ನ ಅವರ ಅಪ್ಪಟ ಅಭಿಮಾನಿ ದೇವ್ ಬಹದ್ದೂರ್ ಅವರ ಜೊತೆ ಫೋಟೋ ತೆಗೆದುಕೊಂಡು ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಕಳೆದ ಮೂರು ವರ್ಷಗಳಿಂದ ಧ್ರುವ ಜನ್ಮದಿನ ಆಚರಿಸಿಕೊಂಡಿರಲಿಲ್ಲ. ಹಾಗಾಗಿ ಈ ಬಾರಿ ಅವರ ಹುಟ್ಟುಹಬ್ಬ ಸಖತ್ ಸ್ಪೆಷಲ್ ಆಗಬೇಕು ಎಂದು ಹಾಲಿನ ಅಭಿಷೇಕ ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ದೇವು ಬಹದ್ದೂರ್ ಮಾತನಾಡಿ ನಾನು ಕಳೆದ ಹನ್ನೆರಡು ವರ್ಷಗಳಿಂದ ಧ್ರುವ ಸರ್ಜಾ ಅವರ ಅಭಿಮಾನಿ ಆಗಿದ್ದು ನಾನು ಪ್ರತಿ ವರ್ಷ ಹುಬ್ಬಳ್ಳಿ ನೆಲದಲ್ಲಿ ನಮ್ಮ ಬಾಸ್ ಹುಟ್ಟು ಹಬ್ಬ ಆಚರಣೆ ಮಾಡುತ್ತಾ ಬಂದಿದ್ದೀನಿ ಜೊತೆಗೆ ಹುಟ್ಟು ಹಬ್ಬಕ್ಕಿಂತ 2 ದಿನ ಮೊದಲು ಅವರ ಮನೆಗೆ ಹೋಗಿ ವಿಶ್ ಕೂಡ ಮಾಡಿ ಬರುತ್ತಾ ಇದ್ದೀನಿ ಎಲ್ಲ ನಟರನ್ನ ಹೋಲಿಸಿದಾಗ ನಮ್ಮ ಬಾಸ್ ಎಲ್ಲರ ಮೇಲೆ ಅಪಾರವಾದ ಗೌರವ ಇದೆ ಮತ್ತು ನನ್ನ ಮೇಲೂ ಅಷ್ಟೇ ಅಪಾರ ಪ್ರೀತಿ ತೋರಿಸುತ್ತಾರೆ ಎಂದರು.
ಜೊತೆಗೆ ಚಿರಂಜೀವಿ ಸರ್ಜಾ ನಟನೆಯ ‘ರಾಜಮಾರ್ತಾಂಡ’ ಸಿನಿಮಾ ಬಿಡುಗಡೆ ಆಗಿದೆ. ಮತ್ತು ಧ್ರುವ ಸರ್ಜಾ ಅವರ ಮಾರ್ಟಿನ್ ಚಿತ್ರ ಕೂಡ ಬರಲಿದೆ ಆ ಖುಷಿ ಕೂಡ ಧ್ರುವ ಸರ್ಜಾ ಅವರ ಅಭಿಮಾನಿಗಳಿಗೆ ಇದೆ ಎಂದರು.