ಲವ್ ಮಾಡಿ ಮ್ಯಾರೇಜ್ ಆಗಿದ್ದ ಮಂಜುನಾಥ್ ಶಿವರಾತ್ರಿ ದಿನವೇ ಶಿವನ ಪಾದಕ್ಕೆ..!
ಹುಬ್ಬಳ್ಳಿ: ಪ್ರೀತಿಸಿ ಮದುವೆಯಾಗಿ ಸುಖಸಂಸಾರದ ಕನಸು ಕಾಣುತ್ತಿದ್ದ ವ್ಯಕ್ತಿಯೊರ್ವ ಆತ್ಮಹತ್ಯೆಗೆ ಶರಣಾದ ಘಟನೆ ನವನಗರದ ಎಲ್ ಐಜಿ 365 ನಲ್ಲಿ ನಡೆದಿದೆ.
ಮಂಜುನಾಥ ಅಬ್ಬಿಗೇರಿ (30) ಮೃತ ದುರ್ದೈವಿ, ಈತ ಮೂಲತಃ ಧಾರವಾಡದ ಎತ್ತಿನಗುಡ್ಡದನಾಗಿದ್ದಾನೆ. 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿ ನವನಗರದ ಎಲ್ ಐಜಿಯಲ್ಲಿ ಬಾಡಿಗೆ ಮನೆಯಲ್ಲಿ ತನ್ನ ಹೆಂಡತಿಯೊಂದಿಗೆ ವಾಸವಾಗಿದನು. ಈತನಿಗೆ ಎರಡು ಮುದ್ದಾದ ಮಕ್ಕಳಿವೆ. ಆದರೆ ಮಂಜುನಾಥ ಅಬ್ಬಿಗೇರಿ ಮೂರು ದಿನಗಳ ಹಿಂದೆ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನಂತೆ. ಮಂಜುನಾಥ ಸಾವನ್ನಪ್ಪಿ ಮೂರು ದಿನಗಳು ಕಳೆದರೂ ಆತನ ಪತ್ನಿ ಮಾತ್ರ ಪತಿ ತೀರಿ ಹೋದ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ತಿಳಿಸಿಲ್ಲವಂತೆ. ಇಂದು ಮೃತ ಮಂಜುನಾಥನ ಶವದ ವಾಸನೆ ಅಕ್ಕಪಕ್ಕ ಬರುತ್ತಿದ್ದಂತೆ ಪಕ್ಕದ ಮನೆಯವರು ನವನಗರ ಎಪಿಎಂಸಿ ಪೋಲಿಸ್ ಠಾಣೆಯ ಪೋಲಿಸರಿಗೆ ವಿಷಯ ತಿಳಿಸಿದ್ದಾರಂತೆ. ಆಗ ಸ್ಥಳಕ್ಕೆ ದೌಡಾಯಿಸಿದ ಪೋಲಿಸರು ಪರಿಶೀಲನೆ ನಡೆಸಿ ಮಂಜುನಾಥ ಅಬ್ಬಿಗೇರಿ ಶವವನ್ನು ಮುಂದಿನ ಕಾರ್ಯಗಳಿಗಾಗಿ ಕಿಮ್ಸ್ ಶವಗಾರಕ್ಕೆ ಕಳುಹಿಸಿದ್ದಾರೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜುನಾಥ ಅಬ್ಬಿಗೇರಿ ಕುಟುಂಬಸ್ಥರು ಮಂಜುನಾಥನ ಸಾವಿನ ಬಗ್ಗೆ ಸಂಶಯವಿದ್ದು, ಈ ಬಗ್ಗೆ ತನಿಖೆ ನಡೆಸಿ ಸತ್ಯಾಸತ್ಯತೆ ತಿಳಿಸಬೇಕೆಂದು ಆಗ್ರಹಿಸಿದ್ದಾರೆ. ಹಾಗಾಗಿ ಪೋಲಿಸರ ತನಿಖೆಯ ನಂತರ ಮಂಜುನಾಥ ಅಬ್ಬಿಗೇರಿ ಸಾವಿನ ಹಿಂದಿನ ರಹಸ್ಯ ಬಹಿರಂಗಗೊಳಬೇಕಾಗಿದೆ.