Uncategorized
ಹುಬ್ಬಳ್ಳಿಯಲ್ಲಿ ಲಿಫ್ಟ್ ಕುಸಿದು ಓರ್ವ ಸಾವು, ಮತ್ತೋರ್ವ ಗಂಭೀರ ಗಾಯ
ಹುಬ್ಬಳ್ಳಿ: ನಗರದ ನೀಲಿಜಿನ್ ರಸ್ತೆ ಕಾಟನ್ ಮಾರ್ಕೆಟ್‌ನ ಶ್ರೀನಾಥ ಕಾಂಪ್ಲೆಕ್ಸ್‌ನಲ್ಲಿ ಲಿಫ್ಟ್ ಕುಸಿದು ಬಿದ್ದ ಪರಿಣಾಮ ಓರ್ವ ಮೃತಪಟ್ಟು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಮೃತ ಮಂಜುನಾಥ ಕುರವತ್ತಿಮಠ
ಈ ಅವಘಡದಲ್ಲಿ ಮೂಲತಃ ಕುಂದಗೋಳ ತಾಲೂಕು ಯರಗುಪ್ಪಿ ಗ್ರಾಮದ, ಇಲ್ಲಿನ ಹಳೇಹುಬ್ಬಳ್ಳಿ ದೇವರ ಗುಡಿಹಾಳ ರಸ್ತೆಯ ಮಂಜುನಾಥ ಚನ್ನವೀರಯ್ಯ ಕುರವತ್ತಿಮಠ (32) ಮೃತಪಟ್ಟಿದ್ದಾರೆ. ಇನ್ನು ಕಾರವಾರ ರಸ್ತೆ ಪೊಲೀಸ್ ಕ್ವಾರ್ಟರ್ಸ್ ಬಳಿಯ ಮಂಗಲ ಓಣಿಯ ಸುರೇಶ ಕುಂದ್ರಳ್ಳಿ ಗಾಯಗೊಂಡಿದ್ದಾರೆ.
ಇವರು ರಾಘವೇಂದ್ರ ಫಾರ್ಮಾದಲ್ಲಿ ಕೆಲಸ ಮಾಡುತ್ತಿದ್ದು, ಪಾರ್ಸಲ್ ತೆಗೆದುಕೊಳ್ಳಲೆಂದು ಕಾಂಪ್ಲೆಕ್ಸ್‌ಗೆ ಬಂದು ಲಿಫ್ಟ್ ನಲ್ಲಿ ಹತ್ತಿದ್ದಾಗ ಒಮ್ಮೆಲೆ ಅದರ ಚೈನ್ ಕತ್ತರಿಸಿ ನೆಲಕ್ಕೆ ಕುಸಿದು ಬಿದ್ದಿದೆ. ಪರಿಣಾಮ ಮಂಜುನಾಥ ಸ್ಥಳದಲ್ಲೇ ಮೃತಪಟ್ಟಿದ್ದು, ಸುರೇಶ ಗಂಭೀರ ಗಾಯಗೊಂಡಿದ್ದಾರೆ. ಈ ಕುರಿತು ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1
1