
ಮುಂಡಗೋಡ : ತಿಬೇಟಿಯನ್ ಆಧ್ಯಾತ್ಮಿಕ ಮಹಾಗುರು, ನೋಬೆಲ್ ಶಾಂತಿ ಪ್ರಶಸ್ತಿ ವಿಜೇತ್ 14ನೇ ದಲೈ ಲಾಮಾ ಅವರು ಗುರುವಾರ ಸಂಜೆ ರಸ್ತೆ ಮಾರ್ಗವಾಗಿ ಮುಂಡಗೋಡದ ತಿಬೇಟಿಯನ್ ಕ್ಯಾಂಪ್ ಆಗಮಿಸಿದರು. ಅವರ ಆಗಮನದ ಹಿನ್ನೆಲೆಯಲ್ಲಿ ಸಂಪೂರ್ಣ ಭದ್ರತೆಯೊಂದಿಗೆ ಎಲ್ಲೆಡೆ ಪೋಲಿಸ್ ಸರ್ಪಗಾವಲು ರಚಿಸಲಾಗಿತ್ತು.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ವತಃ ಪ್ರೋಟೋಕಾಲ್ ಕೈಗೊಳ್ಳುವ ಮೂಲಕ ಅವರ ಸುರಕ್ಷತೆ ಹಾಗೂ ಭೇಟಿ ಕಾರ್ಯಕ್ರಮಗಳು ಸರಾಗವಾಗಿ ನಡೆಯುವಂತೆ ಮಾಡಿದರು.
ಪ್ರವಾಸದ ವೇಳೆ ವೈದ್ಯಕೀಯ ತಂಡ ಮತ್ತು ತುರ್ತು ವಾಹನಗಳನ್ನೂ ನಿಯೋಜಿಸುವ ಮೂಲಕ ಯಾವುದೇ ತಹರದ ಅಡಚಣೆ ಆಗದಂತೆ ಕ್ರಮ ಕೈಗೊಳ್ಳಲಾಗಿದೆ.
ವರದಿ: ವೆಂಕಟೇಶ ದಾಸರ
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
1
+1
+1
1
+1
+1
+1
+1




