ಹುಬ್ಬಳ್ಳಿ: ಅಪರಿಚಿತ ವ್ಯಕ್ತಿಯೊರ್ವ ಹೊಟೆಲ್ ಸ್ಥಳ, ರಿವ್ಯೂ ಹಾಗೂ ಲೈಕ್ ರೇಟಿಂಗ್ ನೀಡಿದರೇ ಹಣ ನೀಡುವುದಾಗಿ ನಂಬಿಸಿ ಹಂತ ಹಂತವಾಗಿ ಹಣವನ್ನು ಲಕ್ಷಾಂತರ ರೂ ಹಣವನ್ನು ವರ್ಗಾಯಿಸಿಕೊಂಡು ಮೋಸ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹೌದು, ಹುಬ್ಬಳ್ಳಿ ತಾಲೂಕಿನ ಕೊಟಗೊಂಡಹುಣಸಿ ಗ್ರಾಮದ ಸೋಮಶೇಖರ್ ನಿಡವಣಿ ವಂಚನೆಗೆ ಒಳಗಾದವರಾಗಿದ್ದು, ಇವರಿಗೆ ಅಪರಿಚಿತ ವ್ಯಕ್ತಿ ಜ.20 ರಿಂದ ನಿರಂತರವಾಗಿ ವ್ಯಾಟ್ಸಪ್ ಸಂದೇಶ ಮಾಡಿ, ಬಳಿಕ make vision promotion A816 ಎಂಬ ಗ್ರೂಪ್’ನಲ್ಲಿ ಸೇರಿಸಿ ಹೊಟೆಲ್ ಸ್ಥಳ, ರಿವ್ಯೂ ಹಾಗೂ ಲೈಕ್ ರೇಟಿಂಗ್ ನೀಡಿ ಹಣ ನೀಡುವುದಾಗಿ ನಂಬಿಸಿ, ಬಳಿಕ ಟೆಲಿಗ್ರಾಮ್’ನಲ್ಲಿ 006—RW-GOOGLE GLOBAL WORKING GROUP ನಲ್ಲಿ ಸೇರಿಸಿ ನಿರಂತರವಾಗಿ ಸಂದೇಶ ಕಳಿಸಿ ಹಣ ಹೂಡಿಕೆ ಮಾಡಿದರೇ GLOBLE INDIA INVESTMENT ಹೂಡಿಕೆ ಮಾಡಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ಜ.21 & 22 ರ ಅವಧಿಯಲ್ಲಿ ಸೋಮಶೇಖರ್ ಅವರ ಐಸಿಐಸಿಐ ಬ್ಯಾಂಕಿನಿಂದ 2.67 ಲಕ್ಷ ರೂಗಳನ್ನು ತಮ್ಮ ಬ್ಯಾಂಕ್ ಖಾತೆಗೆ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.
ಇನ್ನು ಈ ಕುರಿತು ಸೈಬರ್ ಕ್ರೈನ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲಿಸರು ತನಿಖೆ ನಡೆಸುತ್ತಿದ್ದಾರೆ.