Top Newsಅಪರಾಧಜಿಲ್ಲೆ
Trending

ಲಾಭದ ಆಸೆಗೆ ಬಿದ್ದು ಹಣ ಹಾಕುವ ಮುನ್ನ ಎಚ್ಚರ..! ಎಚ್ಚರ..! ಈ ಸ್ಟೋರಿ ಎಲ್ಲವನ್ನೂ ಹೇಳುತ್ತೇ ಓದಿ…

ಹುಬ್ಬಳ್ಳಿ: ಪೋಲಿಸ್ ಇಲಾಖೆ ಅದೆಷ್ಟೋ ಬಾರಿ ಸೈಬ‌ರ್ ವಂಚನೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ರು ಯಾವುದೇ ಪ್ರಯೋಜನ ಬಿರುತ್ತಿಲ್ಲ, ಯಾಕಂದ್ರೇ ಈಗ ಮತ್ತೇ ಹುಬ್ಬಳ್ಳಿ-ಧಾರವಾಡದಲ್ಲಿ ಸೈಬರ್ ಕಳ್ಳರ ಹಾವಳಿ ಹೆಚ್ಚಾಗಿದ್ದು, ಜನರು ಲಾಭದ ಆಸೆಗಾಗಿ ಹಣ ಹಾಕಿ ವಂಚನೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ.

ಹೌದು, ವಿದ್ಯಾಕಾಶಿ ಧಾರವಾಡ ಹಾಗೂ ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಈಗ ಸೈಬರ್ ಕ್ರೈಮ್ ಗಳ‌ ಸಂಖ್ಯೆ ಹೆಚ್ಚುತ್ತಲ್ಲೇ ಇದ್ದು, ಇದು ಪೋಲಿಸರಿಗೆ ತಲೆ ನೋವಾಗಿ ಪರಿಣಮಿಸಿದೆ.

ಇನ್ನೂ ಪೋಲಿಸ್ ಇಲಾಖೆ ಸೈಬರ್ ಕ್ರೈಂ ಕುರಿತು ಅದೆಷ್ಟು ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ಮಾಡುತ್ತಲಿದ್ದರೂ ಜನರು ಮಾತ್ರ ಲಾಭದ ಆಸೆಗೆ ಬಿದ್ದು ಹಣ ಕಳೆದುಕೊಳ್ಳುತ್ತಿದ್ದಾರೆ.

ಅಂತಹದ್ದೆ ಒಂದು ಘಟನೆ ಹುಬ್ಬಳ್ಳಿಯಲ್ಲಿ ಮೊನ್ನೆ ನಡೆದಿದ್ದು, ಯುಟ್ಯೂಬ್ ಚಾನೆಲ್‌ಗಳನ್ನು ಮಾಡಿ ಸ್ಟೀನ್‌ಶಾಟ್ ಕಳುಹಿಸಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂಬ ಜಾಹಿರಾತು ನಂಬಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾನೆ.

ಇಲ್ಲಿನ ವಿದ್ಯಾನಗರದ ನಿವಾಸಿ ಪ್ರಶಾಂತ ಕುಲಕರ್ಣಿ ಎಂಬಾತರೇ ಮೋಸ ಹೋಗಿದ್ದು, ಇವರಿಗೆ ಸೈಬರ್ ಕಳ್ಳರು ವಾಟ್ಸ್‌ಆ್ಯಪ್ ಗೆ ಸಂದೇಶ ಕಳಿಸಿದ್ದು, ಅದನ್ನು ನಂಬಿ 15.61 ಲಕ್ಷ ವರ್ಗಾಯಿಸಿದ್ದಾರೆ. ಸೈಬರ್ ಕಳ್ಳರು ಹೆಚ್ಚಿನ ಹಣ ನೀಡುವುದಾಗಿ ನಂಬಿಸಿ ಕೆಲವು ಟಾಸ್ಕ್‌ಗಳನ್ನು ನೀಡುವ ನೆಪದಲ್ಲಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸ ಮಾಡಿದ್ದಾರೆ.

ಇನ್ನೂ ಇದೇ ರೀತಿ ಹಲವಾರು ಜನರು ಸಾಮಾಜಿಕ ಜಾಲತಾಣದಲ್ಲಿ ವಂಚಕರ ಬಲೆಗೆ ಬಿದ್ದು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಇನ್ನಾದ್ರೂ ಜನರು ಲಾಭದ ಆಸೆಗೆ ಬಿದ್ದು ಮೋಸ ಹೋಗದೇ, ಹಣ ಹಾಕುವ ಮುನ್ನ ಎಚ್ಚರ ವಹಿಸುವುದು ಉತ್ತಮ ಎಂಬುದು ದಿನವಾಣಿ ಕಳಕಳಿಯಾಗಿದೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button