ಹುಬ್ಬಳ್ಳಿ: ಹೊಸ ವರ್ಷಕ್ಕೆ ಇನ್ನೇನು ದಿನಗಣನೇ ಆರಂಭವಾಗಿದೆ. ಈ ನಿಟ್ಟಿನಲ್ಲಿ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ರೌಢಿ ಪೆರೇಡ್ ಮಾಡಿದ್ದಾರೆ.
ಹೌದು, ಇಲ್ಲಿನ ಕಾರವಾರ ರಸ್ತೆಯ ಹಳೆಯ ಸಿಆರ್ ಗ್ರೌಂಡ್ ನಲ್ಲಿ ಹು-ಧಾ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಯ ರೌಢಿಶೀಟರ್ ಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.
ಮುಂದೆ ಅಪರಾಧ ಕೃತ್ಯಗಳನ್ನು ಕೈಬಿಟ್ಟು ಉತ್ತಮ ಬದುಕು ನಡೆಸುವಂತೆ ಬುದ್ದಿವಾದ ಹೇಳಿದ್ದಾರೆ.
ರೌಢಿಶೀಟರ್’ಗೆ ಅಂಬೇಡ್ಕರ್ ಬಗ್ಗೆ ಪಾಠ ಮಾಡಿದ ಕಮಿಷನರ್: ರೌಡಿಶೀಟರ್ ಗಳ ಪರೇಡ್ ವೇಳೆ ಕೊಲೆ ಆರೋಪಿಗೆ ಕಮಿಷನರ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಹಳೇಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಮದನ್ ಮೇಲೆ ಹಲವು ಪ್ರಕರಣಗಳಿವೆ. ಇಂದು ನಡೆದ ರೌಢಿಶೀಟರ್ ಪರೇಡ್ ವೇಳೆ ಅಂಬೇಡ್ಕರ್ ಭಾವಚಿತ್ರವಿರುವ ಪೆನ್ ಹಾಕಿಕೊಂಡು ಬಂದಿದ್ದ, ಇದನ್ನು ಗಮನಿಸಿದ ಕಮಿಷನರ್ ಅಂಬೇಡ್ಕರ್ ಬಗ್ಗೆ ಪಾಠ ಮಾಡಿದ್ದಾರೆ.
ಕೊಲೆ ಆರೋಪಿಗಳು ಎದೆಗೆ ಅಂಬೇಡ್ಕರ್ ಭಾವಚಿತ್ರ ಇಟ್ಟುಕೊಂಡು ಓಡಾಡುವ ಪರಿಸ್ಥಿತಿ ಇನ್ನೂ ನಮ್ಮ ದೇಶಕ್ಕೆ ಬಂದಿಲ್ಲ. ಅಂಬೇಡ್ಕರ್ ಭಾವಚಿತ್ರ ಹಾಕಿಕೊಂಡು ಓಡಾಡೋದಲ್ಲಾ ಅವರ ತತ್ವ ಸಿದ್ದಾಂತಗಳ ಬಗ್ಗೆ ತಿಳಿದುಕೊಂಡು ಬಾ ಎಂದು ಪಾಠ ನೀಡಿದ್ದಾರೆ.
ಮಾಲೆ ಹಾಕಿದ್ದೀಯಾ ಬದಲಾಗು: ಇದೇ ವೇಳೆ ಧಾರವಾಡ ವಿದ್ಯಾಗಿರಿ ಠಾಣೆ ವ್ಯಾಪ್ತಿಯ ಕೆಲವು ರೌಢಿಶೀಟರ್ ಗಳು ಅಯ್ಯಪ್ಪ ಮಾಲೆಯನ್ನು ಹಾಕಿಕೊಂಡು ಬಂದಿದ್ದರು. ಈ ವೇಳೆ ರೌಢಿಶೀಟರ್’ಗೆ ಎನ್.ಶಶಿಕುಮಾರ್ ಮಾಲೆ ಹಾಕಿದ್ದೀಯಾ ಬದಲಾಗು ಎಂದು ಬುದ್ದಿವಾದ ಹೇಳಿದರು.