Top Newsಜಿಲ್ಲೆರಾಜ್ಯ

ಪಾಲಿಕೆಗೆ ಆಯುಕ್ತರಾಗಿ ಡಾ.ರುದ್ರೇಶ ಘಾಳಿ ಬಂದ ತಕ್ಷಣ ಮಾಡಿದ್ದೇನು ಗೊತ್ತಾ?

ರುದ್ರೇಶ ಬಂದ ತಕ್ಷಣ ಮಾಡಿದ್ದೇನು ಗೊತ್ತಾ..?

ಹುಬ್ಬಳ್ಳಿ: ಪಾಲಿಕೆಯ ನೂತನ ಕಮಿಷನರ್ ರುದ್ರೇಶ ಘಾಳಿ ಪಾಲಿಕೆಗೆ ಬಂದ ತಕ್ಷಣ ಮಾಡಿದ್ದೇನು ಗೊತ್ತಾ..?

ವೇರಿ ಇಂಟ್ರಸ್ಟಿಂಗ್ ಸಂಗತಿ ಇದೆ.

ಇದು ಹಿಂದಿನ ಕಮಿಷನರ್ ಡಾ.ಈಶ್ವರನ ಮೇಲಿನ ಕೋಪವೋ ಅಥವಾ ಆನಂದ ಮೇಲಿನ ಮಮತೆಯೋ ಇಲ್ಲವೋ ಸರಕಾರದ ಆದೇಶಕ್ಕೆ ನೀಡಿದ ಬೆಲೆಯೋ? ಇದನ್ನು ನೀವೇ ನಿರ್ಧರಿಸಿ ..

ಚಿತ್ರದ ಎಡದಲ್ಲಿ ಪಾಲಿಕೆ ನೂತನ ಆಯುಕ್ತ ಡಾ.ರುದ್ರೇಶ ಘಾಳಿ, ಬಲ ಚಿತ್ರದಲ್ಲಿ ಡಾ.ಈಶ್ವರ ಉಳ್ಳಾಗಡ್ಡಿ

ಇಲ್ಲಿನ ಮಹಾನಗರ ಪಾಲಿಕೆಗೆ ಕಂದಾಯ ವಿಭಾಗದ ಉಪ ಆಯುಕ್ತರನ್ನಾಗಿ ಸರ್ಕಾರದಿಂದ ನೇಮಕಗೊಂಡಿದ್ದ ಆನಂದ ಕಲ್ಲೋಳಕರ ಅವರನ್ನು ಹಿಂದಿನ ಆಯುಕ್ತ ಡಾ‌. ಈಶ್ವರ ಉಳ್ಳಾಗಡ್ಡಿ ಹುದ್ದೆಯಿಂದ ತೆಗೆದುಹಾಕಿದ್ದರು.

ಇದೀಗ ಹೊಸದಾಗಿ ಆಯುಕ್ತರಾಗಿ ಬಂದ ರುದ್ರೇಶ ಘಾಳಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಆನಂದ ಕಲ್ಲೊಳಿಕರ‌ ಅವರನ್ನು ರೆವಿನ್ಯೂ ವಿಭಾಗದ ಉಪ ಆಯುಕ್ತರನ್ನಾಗಿ ನಿಯೋಜಿಸಿದರು.

ಇದು ಅಚ್ಚರಿ ಯಾದರೂ ಸತ್ಯ…

ಹಿಂದಿನ ಆಯುಕ್ತ ಡಾ.ಈಶ್ವರ ಉಳ್ಳಾಗಡ್ಡಿ, ಆನಂದ ಅವರನ್ನು ಹುದ್ದೆಯಿಂದ ತೆರೆವುಗೊಳಿಸಿ ಆಡಳಿತ ವಿಭಾಗದ ಉಪಾಯುಕ್ತ ಹಾಗೂ ಪರಿಷತ್ ಕಾರ್ಯದರ್ಶಿಯನ್ನಾಗಿ ನೇಮಿಸಿದ್ದರು. ಈ ಮೂಲಕ ಸರ್ಕಾರದ ಆದೇಶಕ್ಕೆ ಬೆಲೆ ನೀಡಿರಲಿಲ್ಲ.

ಅಲ್ಲದೇ ರೆವಿನ್ಯೂ ವಿಭಾಗವನ್ನು ಮುಖ್ಯ ಲೆಕ್ಕಾಧಿಕಾರಿ ಪಿ.ಎನ್ ವಿಶ್ವನಾಥ ಅವರಿಗೆ ಹೆಚ್ಚುವರಿ ಪ್ರಭಾರ ವಹಿಸಿದ್ದರು. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.

ವಿಚಿತ್ರ ಎಂದರೆ, ಆನಂದ ಕಲ್ಲೋಳಕರ ಮತ್ತು ಈಶ್ವರ ಉಳ್ಳಾಗಡ್ಡಿ ಇಬ್ಬರೂ ತಾಲೂಕಿನವರು. ಅಷ್ಟೇ ಅಲ್ಲದೇ ಪಕ್ಕದ ಊರಿನವರು.

ಅದೇಕೆ ಆನಂದ ಅವರನ್ನು ಬದಲಾಯಿಸಿರೋ ಗೊತ್ತಾಗಲಿಲ್ಲ. ವಿಶ್ವನಾಥ ಬಂದರೂ ಸಹ ರೆವಿನ್ಯೂ ದಲ್ಲಿ ಅಂಥದ್ದೇನೂ ಬದಲಾವಣೆ ತರಲಿಲ್ಲ.

ಹೊಸ ಆಯುಕ್ತ ಬಂದ ತಕ್ಷಣವೇ ಆನಂದಗೆ ಮತ್ತೆ ನಿಯೋಜಿಸಿರುವ ಹಿಕಮತ್ ಏನು..?

ಇದು, ರುದ್ರೇಶ ಮತ್ತು ಈಶ್ವರ, ವಿಶ್ವನಾಥಗೆ ಮಾತ್ರ ಗೊತ್ತು..

ಮುಂದಿನ ದಿನಗಳಲ್ಲಿ ಮತ್ತಷ್ಟು ಮಾಹಿತಿಯನ್ನು ನಿಮ್ಮ “ದಿನವಾಣಿ” ತಿಳಿಸಲಿದೆ ನಿರೀಕ್ಷಿಸಿ…

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button