ಜಿಲ್ಲೆಸಂಸ್ಕೃತಿ

ಹುಬ್ಬಳ್ಳಿಯ ಜಿಮ್ ಖಾನಾ ಕ್ಲಬ್’ಗೆ 125ನೇ ವಾರ್ಷಿಕೋತ್ಸವ

ಜ.26 ರಂದು ವಿವಿಧ ಸಮಾರಂಭ

ಹುಬ್ಬಳ್ಳಿ: ಹುಬ್ಬಳ್ಳಿ ಜಿಮ್ ಖಾನಾ ಕ್ಲಬ್ ಸ್ಥಾಪನೆಗೊಂಡು 125 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಜ.26 ರಂದು 125 ನೇ ವಾರ್ಷಿಕೋತ್ಸವ ಸಮಾರಂಭವನ್ನು ಇಲ್ಲಿನ ಹುಬ್ಬಳ್ಳಿ ಜಿಮ್ ಖಾನಾ ಕ್ಲಬ್’ನಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್ ಅಧ್ಯಕ್ಷ ವಿನಾಯಕ ಆಕಳವಾಡಿ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 1899 ರಲ್ಲಿ ಸ್ಥಾಪನೆಗೊಂಡ ಹುಬ್ಬಳ್ಳಿ ಜಿಮ್ ಖಾನಾ ಹುಬ್ಬಳ್ಳಿ, ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸಮೂದಾಯದ ಒಗ್ಗಟ್ಟನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು.

ಕ್ಲಬ್ ವಾರ್ಷಿಕೋತ್ಸವದ ಅಂಗವಾಗಿ ಸಸಿ ನೆಡುವ, ಆರೋಗ್ಯ ಮತ್ತು ಕ್ಯಾನ್ಸರ್ ತಪಾಸಣೆ ಶಿಬಿರ, ಕ್ರಿಕೆಟ್ ಕ್ರೀಡಾಕೂಟ, ಬಿಲಿಯರ್ಡ್ಸ್ ಹಾಗೂ ಸ್ನೂಕರ್ ಪಂದ್ಯಾವಳಿ, ಮಹಿಳಾ ಸಮಿತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅಂದಿನ ಸಮಾರಂಭವನ್ನು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಉದ್ಘಾಟನೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಬಸವರಾಜ ಹೊರಟ್ಟಿ, ಸಂಸದರಾದ ಜಗದೀಶ್ ಶೆಟ್ಟರ್, ಶಾಸಕ ಮಹೇಶ ಟೆಂಗಿನಕಾಯಿ, ಅರವಿಂದ ಬೆಲ್ಲದ್, ಪ್ರಸಾದ್ ಅಬ್ಬಯ್ಯ, ವಿಪ ಸದಸ್ಯರಾದ ಪ್ರದೀಪ್ ಶೆಟ್ಟರ್ ಸೇರಿದಂತೆ ಮುಂತಾದವರು ಪಾಲ್ಗೊಳ್ಳಲಿದ್ದಾರೆ ಎಂದರು.

ಬಳಿಕ ಖ್ಯಾತ ಭರತ ನಾಣ್ಯ ಕಲಾವಿದ ಗುರು ವಿದ್ವಾನ್ ಸುಜಯ ಶಾನಭಾಗ ಭರತನಾಟ್ಯ ಹಾಗೂ ಅಂಗವಿಕಲ ಶಾಸ್ತ್ರೀಯ ನೃತ್ಯಪಟು ಚೈತ್ರಾಲಿ ಚಿಲ್ಲಾಲ ನೃತ್ಯ ಪ್ರದರ್ಶನ ನಡೆಯಲಿದೆ ಎಂದರು‌.

ಪತ್ರಿಕಾಗೋಷ್ಠಿಯಲ್ಲಿ ಎಮ್.ಆರ್.ಪಾಟೀಲ್, ವಿಷ್ಣು ಮೆಹರವಾಡೆ, ಶಂಕರ ಹಿರೇಮಠ, ಶಿವಯೋಗಿ ವಿಭೂತಿಮಠ ಇದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button