Top NewsUncategorizedಅಪರಾಧಜಿಲ್ಲೆವಿಡಿಯೋ
ಕಾಟನ್ ಮಾರ್ಕೆಟ್ ನಲ್ಲಿ ಪಲ್ಟಿಯಾದ ಕಾರು, ಚಾಲಕನ ಕೈ ಕಟ್..!
ಹುಬ್ಬಳ್ಳಿ: ರಸ್ತೆ ಮಧ್ಯದ ಡಿಸೈಡರ್ ಗೆ ಓಮಿನಿ ಕಾರೊಂದು ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಇಲ್ಲಿನ ಕಾಟನ್ ಮಾರುಕಟ್ಟೆಯಲ್ಲಿನ ಸಂಚಾರಿ ಪೋಲಿಸ ಠಾಣೆಯ ಪಕ್ಕದಲ್ಲಿ ಈಗಷ್ಟೇ ನಡೆದಿದೆ.
ಘಟನೆಯಲ್ಲಿ ಓರ್ವನ ಕೈ ಕಟ್ ಆಗಿದ್ದು, ಮತ್ತೊರ್ವನಿಗೆ ತಲೆಗೆ ಗಂಭಿರ ಗಾಯಗಳಾಗಿವೆ. ಗಾಯಗೊಂಡವರು ಬೆಂಗಳೂರು ಮೂಲದವರೆಂದು ಹೇಳಲಾಗಿದ್ದು, ಸ್ಟೀಕರ್ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.ಇವರನ್ನು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ.
ಇವರು ಹೊಸೂರಿನಿಂದ ಚನ್ನಮ್ಮ ವೃತ್ತದ ಕಡೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಚಾಲಕನ ಅಜಾಗರೂಕತೆಯಿಂದ ಈ ದುರ್ಘಟನೆ ನಡೆದಿದೆ. ಸ್ಥಳಕ್ಕೆ ಉತ್ತರ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ಕೂಡಾ ದಾಖಲಿಸಿಕೊಂಡಿದ್ದಾರೆ.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
+1
+1
+1
+1
+1
+1