ಹುಬ್ಬಳ್ಳಿಯಲ್ಲಿ Busstand ಬಿಡದ ಖದೀಮರು; ಕಣ್ಮುಚ್ಚಿ ಕುಳಿತ ಪಾಲಿಕೆ…!
ಹುಬ್ಬಳ್ಳಿ: ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಸಾರ್ವಜನಿಕರ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಹುಬ್ಬಳ್ಳಿಯ ವಿದ್ಯಾನಗರದ ಪ್ರತಿಷ್ಠಿತ ಟೆಂಡರ್ ಶ್ಯೂರ್ ರಸ್ತೆಯಲ್ಲಿ ಶಿರೂರು ಪಾರ್ಕ್ ಬಳಿಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬಸ್ ನಿಲ್ದಾಣ ಮಾಡಲಾಗಿತ್ತು. ಆದ್ರೆ ಇದೀಗ ಆ ಬಸ್ ನಿಲ್ದಾಣ ಮಂಗ ಮಾಯವಾಗಿದ್ದು, ಜನರು ಬಸ್ ನಿಲ್ದಾಣ ಎಲ್ಲಿ ಹೋಯತು ಎಂದು ಹುಡುಕಾಡುವಂತಾಗಿದೆ.
ಟೆಂಡರ್ ಶ್ಯೂರ್ ರಸ್ತೆ ಹೆಚ್ಚು ಜನದಟ್ಟಣೆಯ ಓರಿಯಾ ಆಗಿದ್ದು, ಇಲ್ಲಿ ಪ್ರತಿನಿತ್ಯ ಸಾವಿರಾರು ಜನರು ಕೆಲಸದ ನಿಮಿತ್ತ ಓಡಾಟ ನಡೆಸುತ್ತಾರೆ. ಆದರೆ ಇದೀಗ ಜನರ ಅನುಕೂಲಕ್ಕೆ ನಿರ್ಮಾಣ ಮಾಡಲಾಗಿದ್ದ ಬಸ್ ನಿಲ್ದಾಣ ಕಣ್ಮರೆಯಾಗಿದ್ದು, ಜನರು ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ.
ಇನ್ನು ಬಸ್ ನಿಲ್ದಾಣದ ಹಿಂದೆ ಕಮರ್ಷಿಯಲ್ ಬಿಲ್ಡಿಂಗ್ ನಿರ್ಮಾಣ ಮಾಡಲಾಗುತ್ತಿದ್ದು, ಆ ಮಾಲೀಕರೇ ಈ ಬಸ್ ನಿಲ್ದಾಣ ತೆರವುಗೊಳಿಸಿರಬಹುದು ಎಂಬ ಆರೋಪವನ್ನು ಜನರು ಮಾಡುತ್ತಿದ್ದಾರೆ. ಈ ಅನುಮಾನಕ್ಕೆ ಕಾರಣವೂ ಇದೆ. ಹಿಂದೆ ಇದೇ ಬಸ್ ನಿಲ್ದಾಣವನ್ನು ಬಿಲ್ಡಿಂಗ್ ನಿರ್ಮಾಣ ಮಾಡುತ್ತಿರುವವರು ಬಸ್ ನಿಲ್ದಾಣ ಕಬಳಿಕೆ ಮಾಡಿದ್ದರು, ಈ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ ಬಳಿಕ ಎಚ್ಚೆತ್ತ ಪಾಲಿಕೆ ಅಧಿಕಾರಿಗಳು ಒತ್ತುವರಿ ಮಾಡಲಾದ ಬಸ್ ನಿಲ್ದಾಣವನ್ನು ಪುನಃ ನಿರ್ಮಾಣ ಮಾಡಿ ಜನರ ಧ್ವನಿಗೆ ಸ್ಪಂದಿಸಿದರು.
ಇದೀಗ ಮತ್ತೆ ಅದೇ ಬಸ್ ನಿಲ್ದಾಣ ಮಾಯಾವಾಗಿದ್ದು, ಇದರ ಹಿಂದೆ ಬಿಲ್ಡಿಂಗ್ ಮಾಲೀಕರ ಕೈವಾಡ ಇರಬಹುದು? ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.
ಒಂದ ಅಂತು ಸದ್ಯ ಜನರಿಗೆ ಅನುಕೂಲವಾಗಿದ್ದ ಬಸ್ ನಿಲ್ದಾಣ ಇದೀಗ ಯಾರ ಒತ್ತಡಕ್ಕೊ, ಇಲ್ಲವೇ ಬೇರೆ ಯಾವುದೋ ಕಾರಣಕ್ಕೆ ರಾತ್ರೋರಾತ್ರಿ ಮಂಗಮಾಯವಾಗಿದ್ದು, ಜನರು ಬಸ್ ಹತ್ತಲು, ಇಳಿಯಲು ಕೀ.ಮೀ ನಡೆಯುವ ಪ್ರಸಂಗ ಏರ್ಪಟಿದೆ. ಈಗಲಾದರೂ ಪಾಲಿಕೆ ಆಯುಕ್ತರು, ಸ್ಮಾರ್ಟ್ ಸಿಟಿ ಎಂಡಿ ಹಾಗೂ ಆ ಭಾಗದ ಜನಪ್ರತಿನಿಧಿಗಳು ಇತ್ತ ಗಮನ ಹರಿಸಿ ಮಾಯವಾದ ಬಸ್ ನಿಲ್ದಾಣ ಹುಡುಕಿ ಜನರಿಗೆ ಸಹಾಯ ಮಾಡತ್ತಾರಾ? ಕಾದು ನೋಡಬೇಕಿದೆ.