Uncategorizedಕಥೆ/ಕವನಜಿಲ್ಲೆವಿಡಿಯೋ
Trending

ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಬಂಗಾರದ ಮನುಷ್ಯನ ಬರ್ತ್ ಡೇ…!

ಹುಬ್ಬಳ್ಳಿ: ಕೇಕ್​ ಕತ್ತರಿಸಿ, ಗುಂಡು ತುಂಡು ತಿಂದು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಣೆ ಮಾಡಿಕೊಳ್ಳುವವರು ಒಂದೆಡೆಯಾದರೆ ಇಲ್ಲೊಬ್ಬ ಸಮಾಜಸೇವಕ ತಮ್ಮ ಹುಟ್ಟು ಹಬ್ಬವನ್ನು ವಿಶೇಷವಾಗಿ ಆಚರಣೆ ಮಾಡಿದ್ದಾರೆ.

ಹೌದು, ನಗರದ ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ಸಂತೋಷ ಆರ್ ಶೆಟ್ಟಿ ಎಂಬ ಸಮಾಜಸೇವಕರೇ​ ತಮ್ಮ ಹುಟ್ಟು ಹಬ್ಬವನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಆವರಣದಲ್ಲಿನ ಮಹಾವೀರ ಲಿಂಬ್ ಸೆಂಟರ್ ನಲ್ಲಿ ಗ್ಯಾಂಗ್ರಿನ್ ಇಲ್ಲವೇ, ಅಪಘಾತದಲ್ಲಿ ಕೈಕಾಲು ಕಳೆದುಕೊಂಡ ಬಡಜನರಿಗೆ ಕೃತಕ ಕಾಲು ವಿತರಿಸಿ ಆಚರಿಸಿಕೊಂಡು ಮಾದರಿಯಾಗಿದ್ದಾರೆ. ಸಂತೋಷ ಆರ್ ಶೆಟ್ಟಿ ಹೀಗೆ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ಇದೇ ಮೊದಲೇನಲ್ಲ. ಕಳೆದ ಹಲವಾರು ವರ್ಷಗಳಿಂದ ಈ ರೀತಿಯ ಸಾಮಾಜಿಕ ಕಾರ್ಯಗಳ ಮೂಲಕ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೇ, ಸ್ವತಃ ತಾವೇ ಕಾಲಿಲ್ಲದ ಐದು ಜನರಿಗೆ ಜೋಡಣೆ ಮಾಡಿ ಅರ್ಥಪೂರ್ಣವಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಗಣಪತಿ ಗಂಗೊಳ್ಳಿ, ಗೋಕುಲರಸ್ತೆ ಪೋಲಿಸ್ ಠಾಣೆಯ ಜೆ.ಎಮ್.ಖಾಲಿಮಿರ್ಚಿ, ಕುಶಿ ಟೀಕಾರೆ, ಅನಿಲ ಮಿಸ್ಕಿನ್,‌ ಕಾರ್ತಿಕ ಶೆಟ್ಟಿ, ರಾಮಲಿಂಗ ಸೇರಿದಂತೆ ಮುಂತಾದವರು ಇದ್ದರು.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button