
ಹುಬ್ಬಳ್ಳಿ: ಹಲವು ತಿಂಗಳಿಂದ ತಣ್ಣಗಿದ್ದ ಆಯುಕ್ತರ ವರ್ಗಾವಣೆ ಚರ್ಚೆ ಮತ್ತೆ ಮುನ್ನೆಲೆ ಬಂದಿದೆ.
ಪೊಲೀಸ್ ಆಯುಕ್ತರೋ ಅಥವಾ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರೋ ಎನ್ನುವುದನ್ನು ಕೆಳಗಡೆ ಓದಿರಿ…
ಒಂದೂವರೆ ವರ್ಷದಿಂದ ಪಾಲಿಕೆ ಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅವರ ಟ್ರಾನ್ಸಫರ್ ಬಗ್ಗೆ ಎರಡು ದಿನಗಳಿಂದ ಭಾರೀ ವದಂತಿಗಳು ಹಬ್ಬಿವೆ.
ಪಾಲಿಕೆ ಮೊಗಸಾಲೆಯಲ್ಲಂತೂ ಇದೆ ಮಾತು.
ಕಮಿಷನರ್ ಟ್ರಾನ್ಸಫರ್ ಅಂತೆ ಹೌದಾ ಎದುರಿಗೆ ಬರುವ ಸಿಬ್ಬಂದಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ವೇರಿ ಇಂಟ್ರಸ್ಟಿಂಗ್ ಎಂದರೆ, “ದಿನವಾಣಿ” ವೆಬ್ ಪ್ರತಿನಿಧಿ ಅಚಾನಕ್ಕಾಗಿ ಇವತ್ತು ಪಾಲಿಕೆ ಗೇಟ್ ಒಳಗೆ ಹೋಗುತ್ತಿದ್ದಾಗ ಸೆಕ್ಯೂರಿಟಿ ಯವರು, ಸಾಹೆಬ್ರೆ ಏನು ಹೊಸ ಸುದ್ದಿ.. ಕಮಿಷನರ್ ಸಾಹೆಬ್ರು ಟ್ರಾನ್ಸಫರ್ ಅಂತ, ಹೌದಾ ಎಂದು ಪ್ರಶ್ನಿಸಿದರು.
ಇದನ್ನು ಕೇಳಿ ಅಚ್ಚರಿ ಆಯಿತು. ಮುಂದೆ ಒಳಗೆ ಹೋದಂತೆಲ್ಲ ಇದರ ಬಗ್ಗೆನೆ ಚರ್ಚೆಗಳು.
ಕಾಂಟ್ರಾಕ್ಟರ್ ಗಳು,ಪ್ರತಿಯೊಬ್ಬ ಸಿಬ್ಬಂದಿಗಳಲ್ಲಿ ಇದೇ ಮಾತುಗಳು..
ಎರಡು ದಿನಗಳಿಂದ ಕಮಿಷನರ್ ಊರಲ್ಲಿಲ್ಲ, ಬೆಂಗಳೂರು ಗೆ ಹೋಗಿದ್ದಾರೆ. ಇವತ್ತು ಶುಕ್ರವಾರ ಬರಬೇಕಿತ್ತು ಅದೇಕೋ ಇರಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಮುಗುಮ್ಮಾಗಿ ಮಾತಾಡಿದರು.
ಇದು ನಿಜಾನಾ…
ಹಾಗಾದರೆ, ಇವರೇ ಟ್ರಾನ್ಸಫರ್ ತಗೊಳಲ್ತಾ ಇದ್ದಾರಾ ಅಥವಾ ಬೇರೆಯವರು ಮಾಡಿಸುತ್ತಿದ್ದಾರಾ…
ಮುಂದಿನ ಎಪಿಸೋಡ್ ವರೆಗೂ ವೇಟ್ ಮಾಡಿ.