ಬೆಳಗಾವಿ: ಕಾರ್ಮಿಕ ಇಲಾಖೆಯಲ್ಲಿ ಸಂಭ್ರಮದ ಮಹಿಳಾ ದಿನ ಆಚರಣೆ!!

ಬೆಳಗಾವಿ: ಅಂತರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಬೆಳಗಾವಿಯ ಆಯುಕ್ತರ ಕಾರ್ಮಿಕ ಇಲಾಖೆ ಬೆಳಗಾವಿಯಲ್ಲಿ ಅರ್ಥಪೂರ್ಣವಾಗಿ ಮಹಿಳಾ ದಿನವನ್ನು ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಮಿಕ ಆಯುಕ್ತರಾದ ಅಮರೇಂದ್ರ, ಸಹಾಯಕ ಆಯುಕ್ತರಾದ ದೇವರಾಜ್, ಕಾರ್ಮಿಕ ಅಧಿಕಾರಿಗಳಾದ ಜೋಗುರ್ ಕಛೇರಿಯಲ್ಲಿನ ಮಹಿಳಾ ಕಾರ್ಮಿಕ ಅಧಿಕಾರಿಗಳು ಮತ್ತು ಎಲ್ಲ ಸಿಬ್ಬಂದಿಗಳೊಂದಿಗೆ ಕೇಕ್ ಕತ್ತರಿಸಿ, ಪರಸ್ಪರ ಸಿಹಿ ಹಂಚುವ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಿದರು.
ಇದೇ ವೇಳೆ ಕಾರ್ಮಿಕ ಆಯುಕ್ತರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಮಹಿಳೆ ಅಬಲೆಯಲ್ಲ ಸಬಲೆ. ಸಮಾಜದಲ್ಲಿ ಮಹಿಳೆ ಪುರುಷರಂತೆ ಉತ್ತಮವಾದ ಕಾರ್ಯವನ್ನು ಮಾಡವ ಮೂಲಕ ಸಮಾಜದ ಶ್ರೇಷ್ಠ ದೈವ ಸ್ವರೂಪದಲ್ಲಿ ತಾಯಿಯಾಗಿ ಉತ್ತಮವಾದ ಕಾರ್ಯವನ್ನು ಮಾಡುತ್ತಿರುವುದು ಸಂತೋಷದ ವಿಚಾರವಾಗಿದೆ ಎಂದರು.
ಮಹಿಳೆ ವಿದ್ಯಾವಂತರಾದರೆ ಸಮಾಜವನ್ನು ಸುಧಾರಿಸಬಹುದೆಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಮಹಿಳಾ ಸಿಬ್ಬಂದಿಗಳು ಸಂತೋಷದಿಂದ ರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸುವ ಮೂಲಕ ಮೆರುಗನ್ನ ಹಂಚಿದರು.