ನವೆಂಬರ್ 1ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕವಿಗೊಷ್ಠಿ
ಧಾರವಾಡ: ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಶಿಕ್ಷಕರಾದ ಪ್ರವೀಣ್ ಮುರುಗೋಡ ಮತ್ತು ಸಾಹಿತಿಗಳಾದ ಹೇಮಾವತಿ ಪ್ರವೀಣ್ ಮುರುಗೋಡ ತಮ್ಮ ಮಗಳಾದ ಸಾಹಿತ್ಯ ಹುಟ್ಟು ಹಬ್ಬದ ಪ್ರಯುಕ್ತ ಕವಿಗೋಷ್ಠಿ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಧಾರವಾಡದ ಖಾಸಗಿ ಹಾಲಿನಲ್ಲಿ ಆಯೋಜಿಸಲಾಗಿತ್ತು.

ಕವಿಗೊಷ್ಠಿಗೂ ಮುನ್ನ ಸಾಹಿತ್ಯ ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ಆಚರಿಸಿ, ನಂತರ ಕವಿಗೋಷ್ಠಿ ಕಾರ್ಯಕ್ರಮವನ್ನು ಮಾಡಲಾಯಿತು.
ಕೀರ್ತಿ ಮಠಪತಿ, ಸಾಹಿತಿಗಳಾದ ಡಾ. ರುದ್ರೇಶ್ ಚಳಕಿ, ಗಂಗಾಧರ್ ಎಸ್ ಮರಳಿಹಳ್ಳಿ, ಅಲ್ಲದೆ ಉಳಿದ ಸಾಹಿತಿಗಳು ಕಾರ್ಯಕ್ರಮದಲ್ಲಿ ಕವನ ವಾಚನ ಮಾಡಿದರು. ನಂತರ ಸಾಧಕರಿಗೆ ಸನ್ಮಾನ ಮಾಡಲಾಯಿತು.
ಜಯಶ್ರೀ ಗೌಳಿ (ಪರಿಸರ ಸಮಿತಿ), ಸಾಹಿತಿಗಳಾದ ಡಾ. ರುದ್ರೇಶ್ ಚಳಕೆ, ಗಂಗಾಧರ್ ಎಸ್ ಮರಳಿಹಳ್ಳಿ (ಪತ್ರಿಕಾ ಅಂಕಣ ಬರಹಗಾರರು) ಇವರಿಗೆ ನವಂಬರ್ 1 ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಕರ್ನಾಟಕ ಭುವನೇಶ್ವರಿ ತಾಯಿಯ ಭಾವಚಿತ್ರ ನೀಡಿ ಗೌರವಿಸಲಾಯಿತು. ಕುಮಾರಿ ಸಾಹಿತ್ಯ ಮಗುವಿನ ಪ್ರಥಮ ವರ್ಷದ ಹುಟ್ಟುಹಬ್ಬಕ್ಕೆ ಅಪಾರ ಬಂಧುಗಳು ಆಪ್ತಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಗುವಿಗೆ ಮತ್ತು ದಂಪತಿಗಳಿಗೆ ಹುಟ್ಟುಹಬ್ಬದ ಮತ್ತು ಕರ್ನಾಟಕ ರಾಜ್ಯೋತ್ಸವದ ಶುಭಾಶಯ ತಿಳಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಗಂಗಾಧರ ಎಸ್. ಮರಳಿಹಳ್ಳಿ ಮಾಡಿದರು.




