ಹುಬ್ಬಳ್ಳಿ: ಮುಂದೆ ನಡೆಯಬಹುದಾದ ಅಪರಾಧ ಕೃತ್ಯವನ್ನು ತಡೆಗಟ್ಟಲು ಹೋಗಿದ್ದ ಪೊಲೀಸರ ಮೇಲೆಯೇ ದುಷ್ಕರ್ಮಿಗಳು ಕರ್ತವ್ಯಕ್ಕೆ ಅಡ್ಡಿ ಮಾಡಿ ಬೆದರಿಕೆ ಹಾಕಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಇಲ್ಲಿನ ಸೆಟ್ಲಮೆಂಟ್ ಗಂಗಾಧರ ನಗರದ ಹುಲಿಗೆಮ್ಮ ಗುಡಿ ಹತ್ತಿರ ಡಿ.25 ರಂದು ನಡೆಯಬಹುದಾದ ಅಪರಾಧ ತಡೆಗಟ್ಟಲು ಎಸ್.ಎಚ್.ಓ ಅವರ ಆದೇಶದ ಮೇಲೆ ಬೆಂಡಿಗೇರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಈ ವೇಳೆ ಕೆಲವು ಯುವಕರ ಗುಂಪೊಂದು ಸತೀಶ್ ಹಿರೂರ ಎಂಬಾತನ ಮೇಲೆ ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಲು ಮುಂದಾಗಿದೆ. ಈ ಕೃತ್ಯವನ್ನು ತಡೆಗಟ್ಟಲು ಮುಂದಾದ ಬೆಂಡಿಗೇರಿ ಠಾಣೆಯ ಸಿಬ್ಬಂದಿಗಳಾದ ಶಿವಪ್ಪ ಕಟ್ಟಿಮನಿ, ಎಸ್.ಸಿ.ಚಕ್ರಪತ್ರಿಮಠ ಎಂಬಾತರ ಕರ್ತವ್ಯಕ್ಕೆ ಅಡ್ಡಿಪಡಿಸಿದಲ್ಲೇ, ಅವಾಚ್ಯವಾಗಿ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆ.
ಸದ್ಯ ಗಂಗಾಧರ ನಗರದ ನಿವಾಸಿಗಳಾದ ರಘು ಬೆಸ್ತರ್, ದತ್ತ, ಪ್ರಜ್ವಲ, ಬಾಲರಾಜ, ಚರಣ, ಹಕೀಂ, ಆನಂದ , ಗಿರಿಯಪ್ಪ, ಪುಷ್ಪಾ, ಅಂಕಮ್ಮಾ ಎಂಬಾತರ ಮೇಲೆ ದೂರು ದಾಖಲಾಗಿದ್ದು, ಈಗಾಗಲೇ ಪೊಲೀಸರು ಬಾಲರಾಜ ಅಲಿಯಾಸ್ ಬಾಲ್ಯಾ ಬಳ್ಳಾರಿ ಎಂಬಾತನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳಿಸಿದ್ದಾರೆಂದು ತಿಳಿದುಬಂದಿದೆ.