ಹುಬ್ಬಳ್ಳಿ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಕ್ಷಣ ಗಣನೆ ಆರಂಭವಾಗಿದೆ. ಈ ಹೊತ್ತಿನಲ್ಲಿಯೇ ಆದಾಯ ತೆರಿಗೆ ಅಧಿಕಾರಿಗಳ ತಂಡ (ಐಟಿ) ಧಾರವಾಡ ಜಿಲ್ಲೆಯಲ್ಲಿ ಭ್ರಷ್ಟರ ನಿದ್ದೆ ಗೆಡಿಸಿದ್ದಾರೆ.
ಹೌದು, ಕಾಂಗ್ರೆಸ್ ನಾಯಕರು ಎಂದು ಹೇಳಲಾಗುತ್ತಿರುವ ಹೆಬ್ಬಳ್ಳಿ ಗ್ರಾಮದ ಈರಣ್ಣ ಶಿವಳ್ಳಿ ಹಾಗೂ ಶಿವಳ್ಳಿ ಗ್ರಾಮದ ಫೈರೋಜ್ ನಾಯ್ಕರ್ ಎಂಬಾತರ ಮನೆಯ ಮೇಲೆಯೇ ಐಟಿ ದಾಳಿಯಾಗಿದೆ.
ಈಗಾಗಲೇ ಹತ್ತಾರು ಅಧಿಕಾರಿಗಳು ಇಬ್ಬರ ಮನೆಯನ್ನು ಸಂಪೂರ್ಣವಾಗಿ ಜಲಾಡಿದ್ದಾರೆ. ಈ ವೇಳೆ ಮಹತ್ವದ ಲಾಖಲಾತಿಗಳು ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ.
ಈ ಸಂಬಂಧ ಅಧಿಕಾರಿಗಳೂ ತಮ್ಮ ಪರಿಶೀಲನೆ ಕಾರ್ಯ ಮುಂದುವರೆಸಬಹುದಿದ್ದು, ಹೀಗಾಗಿ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಇನ್ನು ಮೇ.7 ರಂದು ನಡೆಯಲಿರುವ ಲೋಕಸಭಾ ಚುನಾವಣೆಯ ಮತದಾನದ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ಹಣ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಆಧರಿಸಿ ಐಟಿ ತಂಡ ದಾಳಿ ನಡೆಸಿದೆ ಎನ್ನಲಾಗಿದೆ.
ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿಯೂ ತಾಲೂಕಿನ ಕೆಲವು ಕಾಂಗ್ರೆಸ್ ಮುಖಂಡರ ಮನೆ, ಅಂಗಡಿ ಮತ್ತು ಕಚೇರಿಗಳನ್ನು ಅಧಿಕಾರಿಗಳು ಜಾಲಾಡಿದ್ದರು. ಇದೀಗ ಮತ್ತೆ ನಡೆದಿರುವ ಐಟಿ ದಾಳಿಯಿಂದ ಕಾಂಗ್ರೆಸ್ ನಾಯಕರು ಆತಂಕಕ್ಕೊಳಗಾಗಿದ್ದಾರೆ.
ಇದು ಜಿಲ್ಲೆಯ ರಾಜಕೀಯ ವಲಯದಲ್ಲಿ ದೊಡ್ಡ ಸುದ್ದಿಯಾಗಿದ್ದು, ಕುತೂಹಲ ಮೂಡಿಸಿದೆ.