ಕುಂದಗೋಳ ಪೋಲಿಸರಿಂದ ದೌರ್ಜನ್ಯ? ಆರೋಪ : ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ ವೃದ್ದ…
👆ಎತ್ತಿಗೆ ಜ್ವರ ಬಂದರೇ, ಎಮ್ಮೆಗೆ ಬರೆ ಕೊಟ್ಟ ಪೊಲೀಸರು: ಯುವತಿ ಕರೆದೊಯ್ದ ಯುವಕ ? ಪೋಷಕರಿಗೆ ಶಿಕ್ಷೆ
ಹುಬ್ಬಳ್ಳಿ: ತಮ್ಮ ಮಗಳನ್ನು ಅಪಹರಿಸಿಕೊಂಡು ಹೋಗಿದ್ದಾನೆಂದು ಆರೋಪಿಸಿ ಯವತಿಯ ಸಂಬಂಧಿಗಳು ಹಾಗೂ ಪೋಲಿಸರು ಯುವಕನ ಪೋಷಕರಿಗೆ ಮಾನಸಿಕ ಹಾಗೂ ದೈಹಿಕ ದೌರ್ಜನ್ಯ ವೆಸಗಿದ್ದಾರೆಂದು ಯುವಕನ ಸಂಬಂಧಿಗಳು ಆರೋಪಿಸಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಯುವನ ಅಕ್ಕ ಜ್ಯೋತಿ ತಿಪ್ಪಣ್ಣನವರ, ನಮ್ಮ ಸಹೋದರ ಆನಂದ ತಿಪ್ಪಣ್ಣನವರ ಹಾಗೂ ಕುಂದಗೋಳ ಮೂಲದ ಯುವತಿಯನ್ನು ಪ್ರೀತಿಸುತ್ತಿದ್ದರು. ಈ ವಿಷಯ ಕಳೆದ ಎರಡು ವರ್ಷಗಳ ಹಿಂದೆ ಎರಡು ಮನೆಯವರ ಗಮನಕ್ಕೆ ಬಂದಿತ್ತು. ಆಗ ಹಿರಿಯರು ಬುದ್ದಿವಾದ ಹೇಳಿ ಇಬ್ಬರನ್ನೂ ದೂರ ಮಾಡಿದ್ದರು. ಆದರೆ ಮಂಗಳವಾರ ನಮ್ಮ ಸಹೋದರ ಆನಂದ ಹೊರಗಡೆ ಊಟ ಮಾಡಿ ಬರುವುದಾಗಿ ಹೇಳಿ ಹೋಗಿದ್ದನು. ಆದರೆ ಇದುವರೆಗೆ ಮನೆಗೆ ಬರದ ಹಿನ್ನೆಲೆಯಲ್ಲಿ ಧಾರವಾಡದ ವಿದ್ಯಾಗಿರಿ ಪೋಲಿಸ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದೇವೆ.
ಇದರ ಮಧ್ಯೆ ಯುವತಿ ಕಣ್ಮರೆಯಾಗಿದ್ದು, ಇದಕ್ಕೆ ನಮ್ಮ ಸಹೋದರ ಕಾರಣ ಎಂದು ಯುವತಿಯ ಸಂಬಂಧಿಗಳು ಕುಂದಗೋಳ ಪೋಲಿಸರೊಂದಿಗೆ ರಾಯಾಪುರಕ್ಕೆ ಆಗಮಿಸಿ ನಮ್ಮ ಅಜ್ಜ ಮಹದೇವಪ್ಪ ಅವರನ್ನು ವಿಚಾರಣೆ ಹೆಸರಿನಲ್ಲಿ ಕರೆದುಕೊಂಡು ಹೋಗಿ ಮನಬಂದಂತೆ ತಳಿಸಿ ಮನೆಗೆ ಬಿಟ್ಟು ಹೋಗಿದ್ದಾರೆ. ಮತ್ತೆ ನಮ್ಮ ತಂದೆ ಶೆಟ್ಟೆಪ್ಪ ಹಾಗೂ ಮಾವನನ್ನು ವಿಚಾರಣೆಗೆ ಕರೆಸಿಕೊಂಡು ಹೋಗಿ ಈವರೆಗೆ ಪೋಲಿಸರು ಮನೆಗೆ ಕಳಿಸಿಲ್ಲ. ಈ ಬಗ್ಗೆ ವಿಚಾರಿಸಲು ಹೋದರೇ ಬಾಯಿಗೆ ಬಂದ ಹಾಗೇ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆಂದು ಆರೋಪಿಸಿದರು.