Uncategorizedಜಿಲ್ಲೆಸಂಸ್ಕೃತಿ
ಪ್ರೇರಣಾ ಸ್ಕೂಲ್ ಆಫ್ ಡ್ಯಾನ್ಸ್ ವತಿಯಿಂದ ಕಲಾ ಪ್ರದರ್ಶನಂ ಕಾರ್ಯಕ್ರಮ

ಹುಬ್ಬಳ್ಳಿ: ಇಲ್ಲಿನ ಶಕ್ತಿ ನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಆವರಣದಲ್ಲಿ ಹಮ್ಮಿಕೊಂಡ ಪ್ರೇರಣಾ ಸ್ಕೂಲ್ ಆಫ್ ಡ್ಯಾನ್ಸ್ ಮತ್ತು ಶಿವಶಕ್ತಿ ಕಲಾ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಂಡ ಅದ್ದೂರಿಯಾದ ಕಲಾಪ್ರದರ್ಶನ- 2025 ನೃತ್ಯ, ಸಂಗೀತ, ಹಾಸ್ಯ ವಿಶಿಷ್ಟ ಕಾರ್ಯಕ್ರಮಕ್ಕೆ ಕಲಾವಿದ ಯಶವಂತ್ ದೇಶಪಾಂಡೆ ಹಾಗೂ ಡಾ.ರಮೇಶ್ ಮಹಾದೇವಪ್ಪನವರ ಸೇರಿದಂತೆ ಇನ್ನಿತರ ಗಣ್ಯರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಭರತನಾಟ್ಯ ನೃತ್ಯ, ಅರೆ ಪಾಶ್ಚಾತ್ಯ ನೃತ್ಯಗಳು, ಪಂಜಾಬಿ ನೃತ್ಯ,
ದೇಶ ಭಕ್ತಿ ನೃತ್ಯ, ಭಕ್ತಿಗೀತೆಗಳು ನೃತ್ಯ ಸೇರಿದಂತೆ ಇತರ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು.
ಈ ಸಂದರ್ಭದಲ್ಲಿ ಡಾಕ್ಟರ್ ಲಿಂಗರಾಜ್ ಅಂಗಡಿ, ಕಾಮಿಡಿ ನಟ ಮಹದೇವ ಸತ್ತಿಗೇರಿ, ಚಲನಚಿತ್ರ ನಟಿಯರಾದ ಮಾಲತಿ ಸರ್ ದೇಶಪಾಂಡೆ, ಸುಲೋಚನಾ ಕಮತಿಗೆ, ಆನಂದ್ ಕುಲಕರ್ಣಿ, ಪ್ರೇರಣ ಪಾತ್ರ, ಬಾಬು ಸೇರಿದಂತೆ ಇನ್ನೂ ಅನೇಕ ಗಣ್ಯತಿಗಣ್ಯರು ಉಪಸ್ಥಿತರಿದ್ದರು.
ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
1
+1
+1
+1
+1
1
+1
+1