ಹುಬ್ಬಳ್ಳಿಯಲ್ಲಿ ಅಂಬರೀಶ್ ಅಭಿಮಾನಿಯ ಅಭಿಮಾನದ ಕಾರ್ಯ…
ಹುಬ್ಬಳ್ಳಿ: ನಟ ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅಪ್ಪಟ ಅಭಿಮಾನಿ ಮೋಹನ್ ಅಣ್ಣಿಗೇರಿ ತಮ್ಮ ಮಗಳ ಮದುವೆಯ ಆರಕ್ಷತೆಯನ್ನು ಅಂಬರೀಶ್ ದಂಪತಿಗಳ ಮದುವೆ ವಾರ್ಷಿಕೋತ್ಸವದ ದಿನದಂದು ಇಟ್ಟುಕೊಂಡಿದ್ದು, ಅಷ್ಟೇ ಅಲ್ಲದೇ ಬಂದಂತಹ ಅತಿಥಿಗಳಿಗೆ ಸಸಿಗಳನ್ನು ನವ ಮಧು-ವರರ ಮೂಲಕ ವಿತರಣೆ ಮಾಡುವ ಮೂಲಕ ಅಂಬರೀಶ್ ಮೇಲಿನ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ.
ಇಲ್ಲಿನ ಟೌನ್ ಹಾಲ್’ನಲ್ಲಿ ಸೋಮವಾರ ಸ್ಪಂದನಾ ಹಾಗೂ ಮಹಾಂತೇಶ ಅವರ ಮದುವೆ ವಾರ್ಷಿಕೋತ್ಸವ ನಡೆಯಿತು. ಈ ಸಂದರ್ಭದಲ್ಲಿ ನವ ಮಧು-ವರರು ಸಮಾರಂಭಕ್ಕೆ ಆಗಮಿಸಿದ ಅತಿಥಿಗಳಿಗೆ ಸಸಿಗಳನ್ನು ಕೊಟ್ಟು ಪೋಷಿಸುವಂತೆ ತಿಳಿ ಹೇಳಿದರು.
ಇತ್ತಿಚಿನ ದಿನಗಳಲ್ಲಿ ಮನುಷ್ಯ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಇದರಿಂದಾಗಿ ನಿಸರ್ಗ ತನ್ನ ಸಮತೋಲನ ಕಳೆದುಕೊಳ್ಳುತ್ತಿದೆ. ಹೀಗಾಗಿ ಪ್ರತಿಯೊಬ್ಬರೂ ಪರಿಸರ ಕಾಳಜಿ ಮಾಡಬೇಕೆಂದು ಜಾಗೃತಿ ಮೂಡಿಸಿದರು. ಈ ಮೂಲಕ ತಮ್ಮ ಮದುವೆಯನ್ನು ಅರ್ಥಪೂರ್ಣ ಆಚರಣೆ ಮಾಡಿಕೊಂಡರು.
ಇನ್ನು ಕಳೆದ ಒಂದು ತಿಂಗಳಿಂದ ಈ ಮದುವೆ ಸಮಾರಂಭ ನಡೆಯುತ್ತಿದ್ದು, ಅಂಬರೀಶ್ ಅಭಿಮಾನಿ ಮೋಹನ್ ಅಣ್ಣಿಗೇರಿ ತಮ್ಮ ಕುಟುಂಬ ಸಮೇತವಾಗಿ ಕುದ್ದಾಗಿ ಅಂಬರೀಶ್ ನಿವಾಸಕ್ಕೆ ಭೇಟಿ ನೀಡಿ, ಸುಮಲತಾ ಅಂಬರೀಶ್ ಅವರಿಗೆ ಮದುವೆ ಆಮಂತ್ರಣ ಪತ್ರಿಕೆ ನೀಡಿ ಬಂದಿತ್ತು.
ಈ ಸಮಾರಂಭದಲ್ಲಿ ಅಣ್ಣಿಗೇರಿ ಕುಟುಂಬಸ್ಥರು, ಹಿತೈಷಿಗಳು, ಅತಿಥಿಗಳು ಇನ್ನಿತರರು ಉಪಸ್ಥಿತರಿದ್ದರು.