ಬೆಳಗಾವಿ: ನಗರದ ಆಪ್ಟೆಕ್ ಏವಿಯೇಷನ್ ಹಾಸ್ಪಿಟಲಿಟಿ ಅಕಾಡೆಮಿ ಈಗಾಗಲೇ ವಿದ್ಯಾರ್ಥಿಗಳಿಗೆ ಟೂರಿಸಂ ಮತ್ತು ರಿಟೇಲ್ ಕ್ಷೇತ್ರದಲ್ಲಿ ಪ್ರಾಕ್ಟಿಕಲ್ ತರಭೇತಿ ನೀಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸುವ ಕೆಲಸ ಮಾಡಿದೆ.
ಅದರಂತೆ ಅಕಾಡೆಮಿಯಲ್ಲಿ ತರಭೇತಿ ಪಡೆದ ದಾಂಡೇಲಿ ಮೂಲದ ಅಂಜಲಿ ರಾಥೋಡ, ದಿವ್ಯಾ ಯಾದವ್ ಎಂಬಾತರು ಬೆಂಗಳೂರಿನ ಏರ್ ಇಂಡಿಯಾ ಸ್ಯಾಟ್ಸ್’ನಲ್ಲಿ ಉದ್ಯೋಗವನ್ನು ಪಡೆದುಕೊಂಡರು.
ಆಯ್ಕೆಯಾದ ವಿದ್ಯಾರ್ಥಿಗಳು ಗ್ರಾಮೀಣ ಭಾಗದ ಹಿನ್ನೆಲೆ ಹೊಂದಿದ್ದರು, ಅವರಿಗೆ ಯಶಸ್ವಿ ಉದ್ಯೋಗವನ್ನು ಪಡೆಯುವ ಸಂದಿಗ್ಧತೆಯಲ್ಲಿದ್ದರು. ಇವರಿಗೆ ಆಪ್ಟೆಕ್ ಏವಿಯೇಷನ್ ಮತ್ತು ಹಾಸ್ಪಿಟಾಲಿಟಿ ಅಕಾಡೆಮಿ ಅತ್ಯುತ್ತಮ ರೀತಿಯಲ್ಲಿ ಇದೀಗ ವಿದ್ಯಾರ್ಥಿಗಳ ಕನಸು ನೆನಸು ಮಾಡುವಲ್ಲಿ ನೆರವಾಗಿದೆ.
ಅಕಾಡೆಮಿಯಲ್ಲಿ ವಿದ್ಯಾರ್ಥಿಗಳು ತರಭೇತಿ ಪಡೆದು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗ ಪಡೆದಿದ್ದಾರೆ. ರಾಜ್ಯದ ಮೂಲೆ ಮೂಲೆಯಿಂದ ವಿಧ್ಯಾರ್ಥಿಗಳು ಇಲ್ಲಿ ತರಬೇತಿ ಪಡೆಯುತ್ತಿರುವುದು ವಿಶೇಷವಾಗಿದೆ.
ಇನ್ನು ವಿದ್ಯಾರ್ಥಿಗಳಿಗೆ ಅಕಾಡೆಮಿ ವತಿಯಿಂದ ಬಿಳ್ಕೋಡುಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಅವರ ಪೋಷಕರೊಂದಿಗೆ ಆತ್ಮೀಯವಾಗಿ ಸನ್ಮಾನಿಸಿ, ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಶುಭ ಹಾರೈಸಲಾಯಿತು.
ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ನಟ ಸೂರಜ್ ದೇಸಾಯಿ ಆಗಮಿಸಿದರು. ಅಕಾಡೆಮಿ ಮುಖ್ಯಸ್ಥರಾದ ವಿನೋದ ಬಾಮನೆ, ಜ್ಯೋತಿ ಬಾಮನೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.