ಅಪರಾಧಜಿಲ್ಲೆ

ಈಜಲು ಹೋಗಿದ್ದ ಇಬ್ಬರು ಶವವಾಗಿ ಪತ್ತೆ…

ಹುಬ್ಬಳ್ಳಿ: ತಾಲೂಕಿನ ದೇವರಗುಡಿಹಾಳ ಗ್ರಾಮದ ಕೆರೆಯಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಶವವಾಗಿ ಪತ್ತೆಯಾಗಿರುವ ಘಟನೆ ಗುರುವಾರ ನಡೆದಿದೆ.

ಗದಗ ಮೂಲದ ಸ್ಥಳೀಯ ನಿವಾಸಿ ದೀಪಕ ರೋಣದ(21) ಮತ್ತು ವಿದ್ಯಾನಗರ ಲೋಕಪ್ಪನಹಕ್ಕಲ ನಿವಾಸಿ ಮೈಲಾರಿ (24) ಮೃತಪಟ್ಟವರಾಗಿದ್ದಾರೆ.

ಇವರು ಬುಧವಾರದಂದು 7 ಜನ ಸ್ನೇಹಿತರು ಸೇರಿ ದೇವರಗುಡಿಹಾಳ ಕರೆಗೆ ಪಾರ್ಟಿ ಮಾಡಲು ಹೋಗಿದ್ದರು. ಪಾರ್ಟಿ ಮಾಡಿ ಕೆರೆಯಲ್ಲಿ ಈಜಲು ಹೋದಾಗ ನವೀನ ಮೇಲಗೊಪ್ಪ, ಮುಜಾಮಿಲ್, ಅಕ್ಷಯ, ರಜತ್, ಇಸಾಕ್ ವಾಪಸ್ ಬಂದಿದ್ದಾರೆ. ಆದರೆ ದೀಪಕ ಮತ್ತು ಮೈಲಾರಿ ಕೆರೆ ಮಧ್ಯ ಹೋಗಿ ವಾಪಸ್ ಬರುವಾಗ ಮುಳುಗಿದ್ದಾರೆ. ತಕ್ಷಣ ದಡಕ್ಕೆ ಬಂದ ಸ್ನೇಹಿತರು ಅವರಿಗೆ ಹಗ್ಗ ನೀಡಲು ಮುಂದಾದರೂ ಯಾವುದೇ ಪ್ರಯೋಜನವಾಗಿಲ್ಲ.

ಇನ್ನು ಕಳೆದ ದಿನದಿಂದಲೇ ಮೃತರಿಗಾಗಿ ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ಹಾಗೂ ಸ್ಥಳೀಯರು ಹುಡುಕಾಟ ನಡೆಸಿದ್ದರು. ಗುರುವಾರ ಬೆಳಗ್ಗೆ 9 ಗಂಟೆಗೆ ಓರ್ವನ ದೇಹ ಹಾಗೂ 11 ಗಂಟೆ ವೇಳೆಗೆ ಮತ್ತೊಬ್ಬನ ದೇಹ ಪತ್ತೆಯಾಗಿವೆ.

ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಕುರಿತ ನಿಮ್ಮ ಅನಿಸಿಕೆ
+1
0
+1
0
+1
0
+1
0
+1
0
+1
0
+1
0

Related Articles

Leave a Reply

Your email address will not be published. Required fields are marked *

Back to top button