ಹುಬ್ಬಳ್ಳಿ: ತಾಯಿಯ ಸಾವಿನ ಸುದ್ದಿ ನಡುವೆಯೂ ಕರ್ತವ್ಯಕ್ಕೆ ಹಾಜರಾಗಿ ಕರ್ತವ್ಯ ಪ್ರಜ್ಞೆ ಮೆರೆಯುವ ಮೂಲಕ ಇತರರಿಗೆ ಪೋಲಿಸ್ ಅಧಿಕಾರಿಯೊಬ್ಬರು ಮಾದರಿಯಾಗಿದ್ದಾರೆ.
ಹೌದು, ಯಲ್ಲಪ್ಪ ಕಾಶಪ್ಪನವರ ಎಂಬಾತರೇ ಕರ್ತವ್ಯ ಪ್ರಜ್ಞೆ ಮೆರೆದವರಾಗಿದ್ದು, ಇವರು ಹು-ಧಾ ಪೋಲಿಸ್ ಕಮಿಷನರ್ ವ್ಯಾಪ್ತಿಯಲ್ಲಿ ಸಶಸ್ತ್ರ ಮೀಸಲು ಪಡೆಯಲ್ಲಿ ಡಿಸಿಪಿ (ಸಿಎಆರ್) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಆದರೆ ಬುಧವಾರ ಬೆಳಗಿನ ಜಾವ ತಾಯಿಯ ನಿಧನ ಸುದ್ದಿ ಬರುತ್ತದೆ. ಆದರೂ ಸಹ ಹಿರಿಯ ಅಧಿಕಾರಿಗಳ ಗಮನಕ್ಕೆ ವಿಷಯ ತಂದು ದೂರದ ಸವದತ್ತಿಗೆ ತೆರಳಿ ತಾಯಿ ಶಾಂತಮ್ಮನ ಅಂತ್ಯಸಂಸ್ಕಾರ ನೇರವೇರಿಸಿ ಪುನಃ ಮತ್ತೆ ಇಂದೇ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಯಲ್ಲಪ್ಪ ಕಾಶಪ್ಪನವರ ಅವರು.
ಮೃತ ತಾಯಿ ಶಾಂತಮ್ಮ
ತಾಯಿಯ ಅಗಲಿಕೆಯ ನೋವಿನಲ್ಲೂ ಕರ್ತವ್ಯಕ್ಕೆ ಹಾಜರಾದ ಯಲ್ಲಪ್ಪ ಅವರ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದು, ಯಲ್ಲಪ್ಪ ಅವರ ಕರ್ತವ್ಯ ನಿಷ್ಠೆ, ಪ್ರಮಾಣಿಕತೆಗೆ ತುಂಬು ಹೃದಯದಿಂದ ಶುಭ ಕೋರಿದ್ದಾರೆ.
ಕರ್ತವ್ಯ ಪ್ರಜ್ಞೆ ಮೆರೆದ ಪೋಲಿಸ್ ಅಧಿಕಾರಿಗೆ ನಮ್ಮದೊಂದು ಸೆಲ್ಯೂಟ್…