ಹುಬ್ಬಳ್ಳಿ: ಹಲವರು ವಿವಾಹ ವಾರ್ಷಿಕೋತ್ಸವವನ್ನು ಅದ್ಧೂರಿಯಾಗಿ ಮಾಡಿಕೊಳ್ಳಬೇಕು ಎನ್ನುತ್ತಾರೆ. ಆದರೆ ಈ ದಂಪತಿ ಮಾತ್ರ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ವಿಶಿಷ್ಟವಾಗಿ ಹಾಗೂ ಅರ್ಥಪೂರ್ಣವಾಗಿ, ಮತ್ತೊಬ್ಬರಿಗೆ ಮಾದರಿಯಾಗುವ ರೀತಿಯಲ್ಲಿ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದಾರೆ.
ಹಳೇಹುಬ್ಬಳ್ಳಿ ಸಹದೇವನಗರದ ನಿವಾಸಿ ಹಾಗೂ ಪೋಲಿಸ್ ಇಲಾಖೆಯಲ್ಲಿ ಟ್ರಾಫಿಕ್ ಪೋಲಿಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿವಾನಂದ ಬೈರಿಕೊಪ್ಪ ಹಾಗೂ ಭಾರತಿ ಬೈರಿಕೊಪ್ಪ ಎಂಬ ದಂಪತಿಯೇ ಈ ರೀತಿಯಾಗಿ ಮದುವೆ ವಾರ್ಷಿಕೋತ್ಸವವನ್ನು ಆಚರಣೆ ಮಾಡಿಕೊಂಡಿದ್ದು, ಇವರು ಪ್ರತಿವರ್ಷವೂ ತಮ್ಮ ವಾರ್ಷಿಕೋತ್ಸವವನ್ನು ಒಂದಿಲ್ಲೊಂದು ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಾರೆ.
ಈ ಬಾರಿ 28 ನೇ ಮದುವೆ ವಾರ್ಷಿಕೋತ್ಸವವನ್ನು ಗೊಪ್ಪನಕೊಪ್ಪದ ಮನೋವಿಕಾಸ ಬುದ್ದಿಮಾಂದ್ಯ ಮಕ್ಕಳ ಶಾಲೆಯಲ್ಲಿ ಶಾಲೆಯ ಮಕ್ಕಳೊಂದಿಗೆ ಆಚರಣೆ ಮಾಡಿಕೊಂಡಿದ್ದಾರೆ. ಈ ವೇಳೆ ಶಾಲೆಯ ವಿದ್ಯಾರ್ಥಿಗಳಿಗೆ ಊಟ ಹಾಕಿ ಅವರಿಗೆ ಸಿಹಿ ತಿನ್ನಿಸು ವಿತರಿಸಿದ್ದಾರೆ.
ಇನ್ನು ಪೋಲಿಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಶಿವಾನಂದ ಬೈರಿಕೊಪ್ಪ ಮೊದಲಿಂದಲೂ ಸೇವಾ ಮನೋಭಾವ ಹೊಂದಿದ್ದಾರೆ. ಈ ಹಿಂದೆ ತಮ್ಮ ಸಹೋದ್ಯೋಗಿಗಳ ಆರೋಗ್ಯ ತಪಾಸಣೆ ಮಾಡಿಸುವ ಮೂಲಕ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು.
ಬೈರಿಕೊಪ್ಪ ದಂಪತಿಗಳ ದಾಂಪತ್ಯ ಜೀವನ ಸುಖಮಯದಿಂದ ಸಾಗಲಿ ಎಂದು ನಿಮ್ಮ “ದಿನವಾಣಿ” ಶುಭ ಹಾರೈಸುತ್ತದೆ.